ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಮಹಾನಗರ ಪಾಲಿಕೆ–ಮತ್ತೆ ಅತಂತ್ರ

Last Updated 3 ಸೆಪ್ಟೆಂಬರ್ 2018, 6:24 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮತ್ತೆ ಅತಂತ್ರ ಪರಿಸ್ಥಿತಿ ಎದುರಾಗಿದೆ. ಯಾವುದೇ ಪಕ್ಷಕ್ಕೆ ಬಹುಮತ ಲಭಿಸಿಲ್ಲ.

ಸದ್ಯದ ಫಲಿತಾಂಶದ ಪ್ರಕಾರ 22 ಸ್ಥಾನ ಪಡೆದಿರುವ ಬಿಜೆಪಿ ಮುನ್ನಡೆಯಲ್ಲಿದೆ. ಕಾಂಗ್ರೆಸ್‌ 19 ಹಾಗೂ ಜೆಡಿಎಸ್‌ 18 ಸ್ಥಾನಗಳು ಪಡೆದಿವೆ. 1 ಬಿಎಸ್‌ಪಿ ಸೇರಿದಂತೆ ಇತರರು ಆರು ಸ್ಥಾನ ಗಳಿಸಿದ್ದಾರೆ. ಬಹುಮತಕ್ಕೆ 33 ಸ್ಥಾನ ಗಳಿಸಬೇಕು.

ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಪಾಲಿಕೆಯ ಗದ್ದುಗೆ ಏರಿದ್ದವು. ಈ ಬಾರಿ ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಇರುವುದರಿಂದ ಮೈಸೂರು ಮಹಾನಗರ ಪಾಲಿಕೆಯಲ್ಲೂ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯುವ ಸಾಧ್ಯತೆ ಇದೆ.

56ನೇ ವಾರ್ಡ್‌ನಲ್ಲಿಬಿಎಸ್‌ಪಿಯಿಂದಸ್ಪರ್ಧಿಸಿದ್ದ ಅಂಗನವಾಡಿ ಕಾರ್ಯಕರ್ತೆ ಬೇಗಂ (ಪಲ್ಲವಿ) 4,108 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಓದಿರುವ ಇವರು 27 ವರ್ಷಗಳಿಂದಮೈಸೂರು ತಾಲ್ಲೂಕಿನ ಜಟ್ಟಿಹುಂಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಜೆಡಿಎಸ್‌ ಅಧ್ಯಕ್ಷರಿಗೆ ಮುಖಭಂಗ

ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ ಅವರ ವಿರುದ್ಧ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಪೈಲ್ವಾನ್‌ ಶ್ರೀನಿವಾಸ್ ಜಯ ಗಳಿಸಿದ್ದಾರೆ. ಸೋತ ವಿಚಾರವನ್ನು ಕೇಳಿ ಚೆಲುವೇಗೌಡ ಆಘಾತಕ್ಕೆ ಒಳಗಾಗಿದ್ದಾರೆ.ಶ್ರೀನಿವಾಸ್‌ ಜೆಡಿಎಸ್‌ನ ಬಂಡಾಯ ನಾಯಕ ಕೆ.ಹರೀಶ್‌ ಗೌಡ ಬೆಂಬಲ ನೀಡಿದ್ದರು.

42ನೇ ವಾರ್ಡ್‌ನಿಂದ (ಕೆ.ಜಿ.ಕೊಪ್ಪಲು) ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಎಂ.ಶಿವಕುಮಾರ್‌, ಬಿಜೆಪಿ ಅಭ್ಯರ್ಥಿ ಕೆ.ದೇವರಾಜು ಅವರ ವಿರುದ್ಧ 1446 ಮತಗಳನ್ನು ಪಡೆದುಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ, ಈ ವಾರ್ಡ್‌ನಲ್ಲಿಕೊನೆಯ ಕ್ಷಣದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು.

ಮೈಸೂರು ಮಹಾನಗರ ಪಾಲಿಕೆಯ 21ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದಬಿಜೆಪಿಯ ಸಿ.ವೇದಾವತಿ 1,293 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ವಿರೋಧ ಪಕ್ಷದಲ್ಲಿರಲು ಸೈ: ಪ್ರತಾಪ ಸಿಂಹ

‘ವಿರೋಧ ಪಕ್ಷದಲ್ಲಿ ಕೂರಲು ನಾವು ಸಿದ್ಧರಿದ್ದೇವೆ.ರಾಜ್ಯದಲ್ಲಿ ಜೆಡಿಎಸ್‌.ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ. ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಜೆಡಿಎಸ್ ಮೇಲೆ‌ ನಿಂತಿದೆ. ಈ ಹಿಂದೆಯೂ ಬಿಜೆಪಿ - ಜೆಡಿಎಸ್ ಮೈತ್ರಿ ಆಡಳಿತವೇ ಇಲ್ಲಿಇತ್ತು’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT