ಮೈಸೂರು: ದಸರಾ ಮಹೋತ್ಸವದ ಸಿದ್ಧತೆ ಚುರುಕು ಪಡೆದಿದ್ದು, ಗಜಪಡೆ ಸ್ವಾಗತಿಸಲು ಅರಮನೆ ಆವರಣದಲ್ಲಿ ಭರದ ಸಿದ್ಧತೆ ನಡೆದಿದೆ.

ಆನೆಗಳ ಶೆಡ್ ನಿರ್ಮಿಸಲು ಸ್ವಚ್ಛತಾ ಕಾರ್ಯ ನಡೆದಿದ್ದು, ವಿದ್ಯುತ್ ದೀಪ ಅಳವಡಿಕೆ, ಪೇಂಟಿಂಗ್, ಹೂದೋಟ ನಿರ್ಮಾಣದಲ್ಲಿ ಸಿಬ್ಬಂದಿ ತೊಡಗಿದ್ದಾರೆ.

ಗಜಪಡೆಗೆ ಸ್ವಾಗತ ಕೋರಲು ಅರ ಮನೆ ಆವರಣದ ಜಯ ಮಾರ್ತಾಂಡ ದ್ವಾರದ ಬಳಿ ಉದ್ಯಾನದಲ್ಲಿ ಸ್ಪಾಂಜ್ ಹಾಗೂ ತಂತಿ ಬಳಸಿ ಹೂವುಗಳಿಂದ ಆನೆಗಳ ಪ್ರತಿಕೃತಿ ರಚಿಸಲಾಗುತ್ತಿದೆ. ಇಂಥ ಮೂರು ಪ್ರತಿಕೃತಿಗಳನ್ನು ನುರಿತ ಕಲಾವಿದರುಸಿದ್ಧಪಡಿಸುತ್ತಿದ್ದಾರೆ.

ಈ ನಡುವೆ, ಕುಶಾಲ ತೋಪು ಸಿಡಿಸಲು ಅರಮನೆಯಲ್ಲಿ ಫಿರಂಗಿ ಗಾಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಜಂಬೂಸವಾರಿಯಲ್ಲಿ ಪಾ ಲ್ಗೊಳ್ಳ ಲಿರುವ ಅಭಿಮನ್ಯು ಸೇರಿದಂತೆ ಐದು ಆನೆಗಳು ಗುರುವಾರ ಹುಣಸೂರು ತಾಲ್ಲೂಕು ವೀರನಹೊಸಹಳ್ಳಿ
ಯಿಂದ ಹೊರಡಲಿವೆ.

‘ಒಂದು ರಾತ್ರಿ ವಾಸ್ತವ್ಯಕ್ಕೆ ಮೈಸೂರಿನ ಅರಣ್ಯ ಭವನದಲ್ಲಿ ಗಜ ಪಡೆಗೆ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಬೆಳಿಗ್ಗೆ ಟ್ರಕ್‌ನಲ್ಲಿಯೇ ಅರಮನೆ ಆವರಣಕ್ಕೆ ಕರೆದೊಯ್ಯಲಾಗುವುದು. ಕಳೆದ ವರ್ಷದಂತೆ ಅರಣ್ಯ ಭವನದಿಂದ ಅರಮನೆಗೆ ರಸ್ತೆಯಲ್ಲಿ ನಡೆಸಿಕೊಂಡು ಹೋಗುವುದಿಲ್ಲ. ಕೋವಿಡ್ ಕಾರಣ ಈ ಕ್ರಮ ವಹಿಸಲಾಗಿದೆ’ ಎಂದು ಡಿಸಿಎಫ್ (ವನ್ಯಜೀವಿ) ಎಂ.ಜೆ.ಅಲೆಕ್ಸಾಂಡರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಶುಕ್ರವಾರಮಧ್ಯಾಹ್ನ12.18ಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಅರಮನೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಗಜಪಡೆ ಸ್ವಾಗತಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.