ಮೈಸೂರು: ‘ಜಾನಪದ ಎಲ್ಲ ಸಾಹಿತ್ಯದ ತಾಯಿಬೇರು. ಈ ಸಾಹಿತ್ಯದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನ ಇದೆ’ ಎಂದು ಕನ್ನಡ ಜಾನಪದ ಪರಿಷತ್ ವಿಭಾಗೀಯ ಸಂಚಾಲಕಿ ಕಾವೇರಿ ಪ್ರಕಾಶ್ ಹೇಳಿದರು.

ಕನ್ನಡ ಜಾನಪದ ಪರಿಷತ್ ವತಿಯಿಂದ ಶ್ರೀರಾಂಪುರದ ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಜನಪದದಲ್ಲಿ ಹೆಣ್ಣನ್ನು ಭೂಮಿಗೆ, ಪ್ರಕೃತಿಗೆ ಹೋಲಿಸಲಾಗಿದೆ. ಮಹಿಳೆಯ ಕೆಲಸ ಆರಂಭವಾಗುವುದೇ ಮನೆಯ ಮುಂದೆ ಜಾನಪದ ರಂಗೋಲಿ ಹಾಕಿ, ಹೊಸ್ತಿಲು ಪೂಜೆ ಮಾಡುವುದರಿಂದ. ಹೀಗಾಗಿ ಮಹಿಳೆಯರ ನಿತ್ಯ ಬದುಕಿನಲ್ಲಿ ಜಾನಪದ ಹಾಸುಹೊಕ್ಕಾಗಿದೆ ಎಂದರು.

ರಾಗಿ ಬೀಸುವುದರಿಂದ ಹಿಡಿದು ಪ್ರತಿಯೊಂದು ಕಾಯಕದಲ್ಲಿಯೂ ಮಹಿಳೆ ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಲಾಲಿ ಪದ, ಗೀಗಿ ಪದ, ದೂರಿ ಪದ.. ಹೀಗೆ ಎಲ್ಲವೂ ಮಹಿಳೆಯರಿಗೆ ಸಂಬಂಧಪಟ್ಟವೇ ಆಗಿವೆ ಎಂದರು.

ಗೀತಾ ಪಾಂಡುಜಿ ಅವರಿಗೆ ಮೈಸೂರು ಮಾಣಿಕ್ಯ ರತ್ನ, ತತ್ವಪದ ಹಾಡುಗಾರ ಕಾಳಿಸಿದ್ದನಹುಂಡಿಯ ಮಾದೇವ ಹಾಗೂ ಕಂಸಾಳೆ ಕಲಾವಿದ ಹಳೇಪುರ ಸಿದ್ದಶೆಟ್ಟಿ ಅವರಿಗೆ ಜಾನಪದ ಸೇವಾರತ್ನ ಪ್ರಶಸ್ತಿಯನ್ನು ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಪ್ರದಾನ ಮಾಡಿದರು.

ಕಾರ್ಯಕ್ರಮವನ್ನು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಕ್ರೈಸ್ಟ್ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಜಿಂಟೋ ಜೋಸ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಜಂಟಿ ಕಾರ್ಯದರ್ಶಿ ಜಿ. ರವಿಶಂಕರ್, ಸುರೇಶ್ಚಂದ್ರ, ದೊರೆಸ್ವಾಮಿ, ಮಹದೇವ್, ಕ್ರೈಸ್ಟ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವೇದರಾಜ್ ಕೂರಗಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.