ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಹಾಗೂ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್ (ಜೆಡಬ್ಲ್ಯುಜಿಸಿ) ಸಹಯೋಗದಲ್ಲಿ ನಡೆದ ಟೂರ್ನಿಯ ಕಡೆಯ ಎರಡು ದಿನಗಳಲ್ಲಿ ಉತ್ತಮ ಪ್ರದರ್ಶನದೊಂದಿಗೆ (ಸ್ಕೋರ್: 23 ಅಂಡರ್ 257 ) ಶೌರ್ಯ ₹15 ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಂಡರು. ಅವರು ಈ ವರ್ಷ ಜಯಿಸಿದ ಎರಡನೇ ಪ್ರಶಸ್ತಿ ಇದಾಗಿದೆ. ಫೆಬ್ರುವರಿಯಲ್ಲಿ ಊಟಿಯಲ್ಲಿ ನಡೆದ ಪಿಜಿಟಿಎ ಟೂರ್ನಿಯಲ್ಲೂ ಅವರು ಪ್ರಶಸ್ತಿ ಪಡೆದಿದ್ದರು.