ಮೈಸೂರು: ನಗರದ ‘ಜಲನಿಧಿ’ ಕುಕ್ಕರಹಳ್ಳಿ ಕೆರೆ ಹಾಗೂ ಅದಕ್ಕೆ ನೀರು ಪೂರೈಕೆ ಮಾಡುವ ‘ಪೂರ್ಣಯ್ಯ ನಾಲೆ’ ಉಳಿವಿಗೆ ಸೋಮವಾರ ತಮ್ಮ 25ನೇ ‘ನಾಲಾ ನಡಿಗೆ’ ಹೆಜ್ಜೆಯನ್ನು ನಾಗರಿಕರು ಹಾಕಿದರು.

‘ವಾಟರ್ ಫೋರಂ ಮೈಸೂರು’ ಕಳೆದ 2025ರ ಫೆ.9ರಿಂದ ಆಯೋಜಿಸುತ್ತಿರುವ ‘ನಾಲಾ ನಡಿಗೆ’ಯಲ್ಲಿ ‘ಮೈಸೂರು ಗ್ರಾಹಕರ ಪರಿಷತ್ತು’ ಹಾಗೂ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಸದಸ್ಯರು ಭಾಗವಹಿಸಿ ಹೆಜ್ಜೆ ಗುರುತುಗಳನ್ನು ಸೇರಿಸಿದರು. ಒತ್ತುವರಿಯಿಂದ ನಲುಗುತ್ತಿರುವ ನಾಲೆಯನ್ನು ಉಳಿಸುವ ತುರ್ತನ್ನು ಸಾರಿದರು.

ಕುಕ್ಕರಹಳ್ಳಿ ಕೆರೆ ಕೋಡಿ, ಮೈಸೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಭವನ ಹಿಂಭಾಗ, ಕುದುರೆಮಾಳ, ಆಯಿಷ್, ಪುಟ್ಟೀರಮ್ಮ ಕಿವುಡು ಮಕ್ಕಳ ಶಾಲೆ, ಬಿಸಿಲು ಮಾರಮ್ಮ ದೇಗುಲದ ಆವರಣ, ಟಿ.ಕೆ.ಬಡಾವಣೆ, ಬೋಗಾದಿಯ ಪ್ರಶಾಂತನಗರ, ರೈಲ್ವೆ ಬಡಾವಣೆ, ದೀಪಾ ನಗರ, ರೂಪಾ ನಗರದ ಒತ್ತುವರಿ ಸ್ಥಳಗಳನ್ನು ವೀಕ್ಷಿಸಿದರು.

ಮರಟಿಕ್ಯಾತನಹಳ್ಳಿಯ ಎತ್ತರ ಭೂಮಿಯಲ್ಲಿ ಕಂಡ ಕಣಿವೆ ಹಾಗೂ ನಾಲೆಯ ನೋಟಕ್ಕೆ ಮನಸೋತ ನಾಗರಿಕರು ಮಾದಗಳ್ಳಿ ಕೆರೆಯ ಅಂಗಳದಲ್ಲಿನ ಪಾರಂಪರಿಕ ನಾಲಾ ತೂಬು ವೀಕ್ಷಿಸಿ, ವಿವರಣೆ ಪಡೆದರು. ಸ್ಥಳೀಯರೂ ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡರು.

ಪರಿಸರ ತಜ್ಞ ಯು.ಎನ್.ರವಿಕುಮಾರ್ ಮಾತನಾಡಿ, ‘ಕಾವೇರಿಯಿಂದ ನೀರು ತರುವ ಪೂರ್ಣಯ್ಯ ನಾಲೆಯು ದೇವರಾಜ ಮಾರುಕಟ್ಟೆ ಬಳಿ ಸ್ಥಗಿತಗೊಂಡು ವಿಫಲವಾಯಿತು. ಹೀಗಾಗಿ ಪೂರ್ಣಯ್ಯ ನಾಲೆ–2 ಅನ್ನು ಹುಯಿಲಾಳು– ಮಾದಗಳ್ಳಿ ಕೆರೆಯಿಂದ ಕುಕ್ಕರಹಳ್ಳಿ ಕೆರೆಗೆ ನಿರ್ಮಿಸಲಾಯಿತು. ಕಾವೇರಿ ಹಾಗೂ ಕಬಿನಿ ಬೇರ್ಪಡಿಸುವ ‘ಇಲವಾಲ ಎತ್ತರ ಭೂಮಿ’ ದಕ್ಷಿಣ ತಗ್ಗನ್ನು ಅನುಸರಿಸಿ ಕಟ್ಟಲಾಯಿತು’ ಎಂದರು.

‘ನಾಲೆ 25 ಕಿ.ಮೀ ಉದ್ದವಿದ್ದು, ಕೊನೆಯ 9 ಕಿ.ಮೀ ಮತ್ತು ಕುಕ್ಕರಹಳ್ಳಿ ಸಮೀಪದ 5 ಕಿ.ಮೀ ನಾಲೆಯನ್ನು ಉಳಿಸಿಕೊಳ್ಳಬಹುದಾಗಿದೆ. ಕುಕ್ಕರಹಳ್ಳಿ ಕೆರೆಗೆ ಅಗತ್ಯ ನೀರು ಸಿಗಲಿದೆ. ಉಳಿದ ಭಾಗದಲ್ಲಿನ ನಾಲೆಯನ್ನು ಅಂತರ್ಜಲ ಹೆಚ್ಚಿಸಲು ಮುಂದಾಗಬೇಕಿದೆ’ ಎಂದರು.

ಮೈಸೂರು ಗ್ರಾಹಕ ಪರಿಷತ್ತಿನ ಭಾಮಿ ವಿ.ಶೆಣೈ, ಪರಿಸರಕ್ಕಾಗಿ ನಾವು ಸಂಘಟನೆಯ ಪರಶುರಾಮೇಗೌಡ, ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ಚಂಪಾ, ಪ್ರೊ.ಕಾಳಚನ್ನೇಗೌಡ, ಪತ್ರಕರ್ತೆ ರಶ್ಮಿಕೋಟಿ, ಮಧುಕೇಶ್ವರ್, ಶೋಭಾನಾ, ಶೈಲಜೇಶ್, ಲೀಲಾ ಶಿವಕುಮಾರ್, ಭಾಗ್ಯ ಶಂಕರ್, ಸುಶೀಲಾ, ಸಿಂಧುವಳ್ಳಿ ಅಕ್ಬರ್, ಗಣೇಶ್, ಸುಗುಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.