1982 ರಲ್ಲಿ ಆರಂಭವಾದ ಸಾಹಸ ಕ್ರೀಡೆ..!
ಬೈಕ್ ಸ್ಟಂಟ್ ಸಾಹಸ ಕ್ರೀಡೆಯು 1982ರಲ್ಲಿ ಮೈಸೂರು ದಸರಾದ ಪಂಜಿನ ಕವಾಯತಿಗೆ ಪರಿಚಯಿಸಲಾಗಿತ್ತು. ‘1912ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಪಂಜಿನ ಕವಾಯತು ಆರಂಭಗೊಂಡಿತು. 1953ರಿಂದ ಸರ್ಕಾರ ಅದನ್ನು ಮುಂದುವರೆಸಿತು. 1982ರಲ್ಲಿ ಆಗಿನ ದಕ್ಷಿಣ ವಲಯ ಡಿಐಜಿ ಎಸ್‌ಎನ್‌ಎಸ್ ಮೂರ್ತಿ ಹಾಗೂ ಎಸ್‌ಪಿ ರೇವಣ್ಣ ಸಿದ್ದಯ್ಯ ಆಡಳಿತಾವಧಿಯಲ್ಲಿ ಬೈಕ್ ಸ್ಟಂಟ್ ಸಾಹಸ ಕ್ರೀಡೆಯನ್ನು ಆರಂಭಿಸಲಾಯಿತು’ ಎಂದು ಮೊದಲ ಬಾರಿ ಬೈಕ್ ಸ್ಟಂಟ್ ನಡೆದಾಗ ವೀಕ್ಷಕ ವಿವರಣೆ ನೀಡಿದ್ದ ನಿವೃತ್ತ ಡಿವೈಎಸ್‌ಪಿ ಜೆ.ಬಿ.ರಂಗಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಮೂಲಕ 43 ವರ್ಷದ ಪರಂಪರೆಯೊಂದು ಕೊನೆಗೊಳ್ಳುವ ಹಂತದಲ್ಲಿದೆ.