ಮೈಸೂರು: ‘ಹೃದಯಾಘಾತ, ಪಾರ್ಶ್ವವಾಯು ಅಥವಾ ಗಂಭೀರ ಅಪಘಾತಗಳಂಥ ತುರ್ತು ಸಂದರ್ಭಗಳಲ್ಲಿ ಮೊದಲ ಕೆಲವು ನಿಮಿಷಗಳಲ್ಲೇ ಸರಿಯಾಗಿ ಚಿಕಿತ್ಸೆ ನೀಡುವುದು ವ್ಯಕ್ತಿಯ ಪ್ರಾಣ ಉಳಿಸುವಲ್ಲಿ ಅತ್ಯಗತ್ಯ’ ಎಂದು ನಗರದ ಮಣಿಪಾಲ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ. ಮಕ್ಸೂದ್ ಅಹಮದ್ ಎ.ಆರ್. ತಿಳಿಸಿದರು.

ಆಸ್ಪತ್ರೆಯಿಂದ ‘ತುರ್ತು ಪ್ರತಿಕ್ರಿಯೆ ಮತ್ತು ಮೂಲಭೂತ ಜೀವ ರಕ್ಷಣೆ’ ಕುರಿತು ಈಚೆಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂಥ ಸಂದರ್ಭದಲ್ಲಿ ಹತ್ತಿರದಲ್ಲಿರುವವರು ಸಮಯ ವ್ಯರ್ಥ ಮಾಡದೇ ಕೂಡಲೇ ತುರ್ತು ಸೇವೆಗೆ ಕರೆ ಮಾಡಬೇಕು. ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬೇಕು. ಇದರಿಂದ ತೀವ್ರ ಅಂಗವೈಕಲ್ಯ ಮತ್ತು ಓಡಾಡಲು ಸಾಧ್ಯವಾಗದ ಸ್ಥಿತಿಯನ್ನು ತಡೆಯಬಹುದು’ ಎಂದು ವಿವರಿಸಿದರು.

ಹೃದ್ರೋಗ ತಜ್ಞ ಡಾ.ಶರತ್ ಬಾಬು ಎನ್.ಎಂ., ‘ಜನರಲ್ಲಿ ಪ್ರಾಥಮಿಕ ತುರ್ತು ಚಿಕಿತ್ಸೆಯ ಅರಿವಿದ್ದರೆ ತಮ್ಮ ಸಮೀಪದಲ್ಲಿ ನಡೆಯುವ ಹೃದಯಾಘಾತ ಪ್ರಕರಣದ ರೋಗಿಯನ್ನು ಬದುಕಿಸಲು ಸಹಕರಿಸಬಹುದು’ ಎಂದರು.

ತುರ್ತು ಚಿಕಿತ್ಸಾ ತಂಡದವರಾದ ಡಾ.ಸೈಯದ್ ಮುಶೀರುದ್ದೀನ್, ಡಾ.ಗೌತಮ್ ಚಂದ್ರ, ಡಾ.ರಾಯಲ ಸಗುಣ ದತ್ತ ಮತ್ತು ಡಾ.ಅಮೀನಾ ಹುಸ್ನಾ ಅವರು ಪ್ರಥಮ ಚಿಕಿತ್ಸೆ ನೀಡಿ ಹೇಗೆ ಸಹಾಯ ಮಾಡಬೇಕು ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. 110ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.