ಮೈಸೂರು: ನಗರದ ಠಾಣೆಗಳಲ್ಲಿ ಎಂಟು ತಿಂಗಳ ಅವಧಿಯಲ್ಲಿ ದಾಖಲಾದ 149 ಪ್ರಕರಣಗಳಲ್ಲಿ ಪತ್ತೆಹಚ್ಚಿರುವ ₹4.23 ಕೋಟಿ ಮೌಲ್ಯದ ವಸ್ತಗಳನ್ನು ನಜರಬಾದ್ನ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ವಾರಸುದಾರರಿಗೆ ಹಸ್ತಾಂತರಿಸಿದರು.

2 ದರೋಡೆ, 4 ಸುಲಿಗೆ, 21 ಸರಗಳ್ಳತನ, 34 ಕಳವು, 6 ಮನೆಗಳವು, 69 ವಾಹನ ಕಳವು, 13 ಸಾಮಾನ್ಯ ಕಳವು ಪ್ರಕರಣಗಳಲ್ಲಿ ಬಂಧಿಸಿರುವ 20 ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತುಗಳನ್ನು ಹಸ್ತಾಂತರಿಸಲಾಯಿತು. ವಸ್ತುಗಳನ್ನು ಪಡೆದ ವಾರಸುದಾರರು ಸಂತಸದಿಂದ ಮನೆಗೆ ತೆರಳಿದರು.

₹4.23 ಕೋಟಿ ಮೌಲ್ಯದ 5.320 ಕೆಜಿ ಚಿನ್ನ, 6.24 ಕೆ.ಜಿ ಬೆಳ್ಳಿ, ₹13.50 ಲಕ್ಷ ನಗದು, 52 ಬೈಕ್, 9 ಕಾರು, 8 ಗೂಡ್ಸ್ ವಾಹನಗಳನ್ನು ಹಿಂದಿರುಗಿಸಲಾಯಿತು.

ಸೀಮಾ ಲಾಟ್ಕರ್ ಮಾತನಾಡಿ, ‘ವಿವಿಧ ಠಾಣೆಗಳಲ್ಲಿ ದಾಖಲಾದ 149 ಪ್ರಕರಣದಲ್ಲಿ ಇಬ್ಬರು ಅಂತರರಾಜ್ಯ ಆರೋಪಿಗಳೂ ಸೇರಿದಂತೆ 20 ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ಎನ್ಡಿಎಸ್ಪಿ ಕಾಯ್ದೆಯಡಿ ದಾಖಲಾದ 25 ಪ್ರಕರಣಗಳಲ್ಲಿ, 52 ಆರೋಪಿಗಳಿಂದ ₹57.47 ಲಕ್ಷ ಮೌಲ್ಯದ 224 ಕೆಜಿ ಗಾಂಜಾ ಹಾಗೂ 96 ಗ್ರಾಂ ಸಿಂಥಿಟಿಕ್ಸ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆನ್ಲೈನ್ ಪ್ರಕರಣಗಳಲ್ಲಿ 13 ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ’ ಎಂದು ತಿಳಿಸಿದರು.

ಉಪ ಪೊಲೀಸ್ ಆಯುಕ್ತರಾದ ಎಂ.ಮುತ್ತುರಾಜ್, ಕೆ.ಎಸ್.ಸುಂದರರಾಜ್ ಹಾಗೂ ಎಸಿಪಿ, ಇನ್ಸ್ಪೆಕ್ಟರ್ಗಳು ಇದ್ದರು. ಇದೇ ವೇಳೆ ಆರೋಪಿಗಳ ಪತ್ತೆಗೆ ಶ್ರಮಿಸಿದ ಪೊಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೀಮಾ ಲಾಟ್ಕರ್ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ವಿತರಿಸಿದರು.

ನಾಲ್ಕು ತಿಂಗಳ ಹಿಂದೆ ನಮ್ಮ ಮನೆಯ ಬಳಿಯ ದೇವಾಲಯಕ್ಕೆ ತೆರಳಿ ವಾಪಸ್ ಬರುತ್ತಿದ್ದಾಗ ಹಿಂದಿನಿಂದ ಬಂದ ಇಬ್ಬರು ನನ್ನ ಮೇಲೆ ದಾಳಿ ನಡೆಸಿ 11.5 ಗ್ರಾಂ ಚಿನ್ನದ ಸರವನ್ನು ಕಸಿದಿದ್ದರು. ಕಷ್ಟಪಟ್ಟು ಕೂಡಿಟ್ಟಿದ್ದ ಸರ ಕಳೆದುಕೊಂಡು ಆತಂಕದಲ್ಲಿದ್ದೆ. ಅದನ್ನು ಹಿಂದಿರುಗಿಸಲು ಸಹಕರಿಸಿದ ಪೊಲೀಸರಿಗೆ ಧನ್ಯವಾದ
ವಿಜಯಲಕ್ಷ್ಮಿ ಕುವೆಂಪುನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.