ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಚರ್ಚಾ ಸ್ಪರ್ಧೆ: ನಾಗಶ್ರೀ ಪ್ರಥಮ, ಮಾದಲಾಂಬಿಕಾ ದ್ವಿತೀಯ

ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಸಾಧನೆ
Last Updated 25 ಫೆಬ್ರುವರಿ 2023, 12:40 IST
ಅಕ್ಷರ ಗಾತ್ರ

ಮೈಸೂರು: ರಾಜ್ಯ ಸಹಕಾರ ಮಹಾಮಂಡಳ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ನಂಜನಗೂಡು ತಾಲ್ಲೂಕು ದೇವನೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ನಾಗಶ್ರೀ(ಚುಂಚನಹಳ್ಳಿ) ಮತ್ತು ಮಾದಲಾಂಬಿಕಾ (ನಂಜನಹಳ್ಳಿ) ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಅವರು, ರಾಜ್ಯದ 29 ಜಿಲ್ಲೆಯ 58 ವಿದ್ಯಾರ್ಥಿಗಳ ಜೊತೆ ಪೈಪೋಟಿ ನೀಡಿ ಯಶಸ್ಸು ಕಂಡಿದ್ದಾರೆ.

ಅವರನ್ನು ಡಿಡಿಪಿಯು ನಾಗಮಲ್ಲೇಶ್ ಮೈಸೂರಿನ ತಮ್ಮ ಕಚೇರಿಯಲ್ಲಿ ಶನಿವಾರ ಅಭಿನಂದಿಸಿದರು.

ನಂತರ ಮಾತನಾಡಿ, ‘ಗ್ರಾಮೀಣ ಪ್ರತಿಭೆಗಳು ಕೀಳರಿಮೆಯನ್ನು ದೂರ ಮಾಡಿಕೊಂಡು ಸ್ಪರ್ಧೆಗಳಲ್ಲಿ ಧೈರ್ಯದಿಂದ ಪಾಲ್ಗೊಳ್ಳಬೇಕು. ಆಗ ಮಾತ್ರ ಇಂತಹ ನೂರಾರು ಗ್ರಾಮೀಣ ಪ್ರತಿಭೆಗಳು ಹೊರ ಬರಲು ಸಾಧ್ಯ. ಕಮಲ ಕೆಸರಿನಲ್ಲಿಯೇ ಹುಟ್ಟುತ್ತದೆ ಎನ್ನುವುದನ್ನು ಮರೆಯಬಾರದು’ ಎಂದರು.

‘ಗ್ರಾಮೀಣ ಭಾರತವೇ ಶೈಕ್ಷಣಿಕ ಪ್ರತಿಭೆಗಳ ತವರು ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷಾ ವಿಷಯದ ಜ್ಞಾನವನ್ನು ಗಳಿಸಬೇಕು. ಪ್ರಚಲಿತ ವಿಷಯಗಳ ಅರಿವಿನ ಜೊತೆಗೆ ಐಚ್ಛಿಕ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಉಪನ್ಯಾಸಕ ಡಾ.ಉಮೇಶ್ ಬೇವಿನಹಳ್ಳಿ ಅವರನ್ನೂ ಅಭಿನಂದಿಸಿದರು.

ಕಾಲೇಜಿನ ಪ್ರಾಚಾರ್ಯ ಬಾಲಸುಬ್ರಹ್ಮಣ್ಯಂ ಎಸ್. ಮಾತನಾಡಿದರು. ಉಪನ್ಯಾಸಕರಾದ ವಿನೇಶ್, ಸುರೇಶ್, ಎನ್.ಮರಿಯಾಜಾಯ್ಸ್ ನಜರತ್, ಪ್ರಶಾಂತ್ ಕುಮಾರ್, ಸುಶೀಲಾ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT