ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯರ ಸೇವೆಯ ಸ್ಮರಣೆ ಅಗತ್ಯ: ಎಸ್.ಜ್ಞಾನಶಂಕರ್‌

Published 1 ಜುಲೈ 2024, 16:24 IST
Last Updated 1 ಜುಲೈ 2024, 16:24 IST
ಅಕ್ಷರ ಗಾತ್ರ

ಮೈಸೂರು: ‘ಮಾನವ ಕುಲದ ಸೇವೆಗೆ ಶ್ರಮಿಸುತ್ತಿರುವ ವೈದ್ಯರನ್ನು ಸ್ಮರಿಸುವುದು ಅಗತ್ಯ’ ಎಂದು ಸಿಗ್ಮಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಜ್ಞಾನಶಂಕರ್‌ ಹೇಳಿದರು.

ನಗರದ ಸಿಗ್ಮಾ ಆಸ್ಪತ್ರೆಯುಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬಿ.ಸಿ.ರಾಯ್‌ ಅವರ ಸೇವೆ ಶ್ಲಾಘನೀಯ. ಇಂದು ಅವರ ಸ್ಮರಣೆಯ ದಿನ. ವೈದ್ಯರ ಮಹತ್ವ ಅರಿಯಲು ಈ ದಿನವೂ ಒಂದು ವೇದಿಕೆಯಾಗಲಿ’ ಎಂದರು.

ಆಸ್ಪತ್ರೆಯ ನಿರ್ದೇಶಕ ಡಾ.ಮಾದಪ್ಪ ಮಾತನಾಡಿ, ‘ಕಿಡ್ನಿ ಕಸಿ ಮಾಡುವಲ್ಲಿ ನಮ್ಮ ಆಸ್ಪತ್ರೆ ಉತ್ತಮ ಸೌಲಭ್ಯ ಹೊಂದಿದೆ. ಆಸ್ಪತ್ರೆಯಲ್ಲಿ ಸರ್ಕಾರಿ ಹಾಗೂ ಸಹಕಾರಿ ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ ಲಭ್ಯವಿದೆ’ ಎಂದು ತಿಳಿಸಿದರು.

ಬನ್ನೂರಿನ ಪುರುಷೋತ್ತಮ ಮಾತನಾಡಿ, ‘ಹತ್ತು ವರ್ಷದಿಂದ ಉದರ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲ ಆಸ್ಪತ್ರೆಗಳಲ್ಲಿ ತೋರಿಸಿ ಶಮನ ಆಗದಿದ್ದಾಗ ಈ ಆಸ್ಪತ್ರೆಯಲ್ಲಿ ಉದರ ಶಸ್ತ್ರಚಿಕಿತ್ಸೆ ಮಾಡಿ, ಗುಣಮುಖನಾಗಿದ್ದೇನೆ’ ಎಂದು ತಮ್ಮ ಅನುಭವ ಹಂಚಿಕೊಂಡರು, ವೈದ್ಯರಿಗೆ ಕೃತಜ್ಞತೆ ತಿಳಿಸಿದರು.

ಆಸ್ಪತ್ರೆಯ ನಿರ್ದೇಶಕಿ ಮಕ್ಕಳ ಹಿರಿಯ ತಜ್ಞರಾದ ಡಾ.ರಾಜೇಶ್ವರಿ ಮಾದಪ್ಪ, ರಕ್ತ ಪರೀಕ್ಷಕಿ ಡಾ.ಶ್ರೀದೇವಿ, ಹೃದಯ ತಜ್ಞ ಡಾ.ಕೃಷ್ಣಪ್ರಸನ್ನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT