ಮೈಸೂರು: ಆಟ ಆಡುತ್ತಿದ್ದಾರಾ ಇಲ್ಲವಾ ತಿಳಿಯುವುದಿಲ್ಲ, ಆಟ ಆಡುವುದಕ್ಕೆ ಅಡ್ಡೆಯೂ ಬೇಕಿಲ್ಲ, ಆಟ ಆಡಿಸುವವರು ಯಾರು? ಅದೂ ಗೊತ್ತಾಗುವುದಿಲ್ಲ. ಆಟಕ್ಕೆ ಬೇಕಾದ ಪರಿಕರ ಮೊಬೈಲ್ ಮತ್ತು ಇಂಟರ್‌ನೆಟ್ ಅಷ್ಟೇ. ಕೊನೆಗೆ, ಜೇಬು ಖಾಲಿಯಾದದ್ದು ಮಾತ್ರ ತಿಳಿಯುತ್ತದೆ. ಇಷ್ಟಾದರೂ ಆಟ ಆಡುವುದನ್ನು ಮಾತ್ರ ಜನರು ಬಿಡಲೊಲ್ಲರು.

ಹೌದು, ಇದು ಆನ್‌ಲೈನ್ ಮಟ್ಕಾ. ಸಾಂಪ್ರದಾಯಿಕ ಮಟ್ಕಾದಂತೆ (ಓ.ಸಿ– ಓಪನ್ ಕ್ಲೋಸ್) ಇದಕ್ಕೊಂದು ಅಡ್ಡೆ ಬೇಕಿಲ್ಲ. ಜನರು ಒಟ್ಟಿಗೆ ಗುಂಪು ಸೇರುವ ಅಗತ್ಯವೂ ಇಲ್ಲ. ಆದರೆ, ಆಟ ಮಾತ್ರ ಸಾಗುತ್ತದೆ. ಜನರು ಮೋಸ ಹೋಗುತ್ತಾರೆ. ಸ್ಮಾರ್ಟ್‌ಫೋನ್‌ಗಳು ಎಲ್ಲರ ಕೈಗೆ ಬಂದ ಮೇಲೆ ಹಾಗೂ ಇಂಟರ್‌ನೆಟ್ ಅಗ್ಗವಾದ ಬಳಿಕ ಮಟ್ಕಾದ ಹೊಸ ಹೈಟೆಕ್ ರೂಪ ಹೀಗಿದೆ.

ನಗರದ ಕೊಳೆಗೇರಿಗಳಲ್ಲಿ, ಕಾರ್ಮಿಕರು ವಾಸ ಮಾಡುವ ಕಾಲೊನಿಗಳಲ್ಲಿ, ಆಟೊ ಚಾಲಕರು, ಮಧ್ಯಮವರ್ಗದವರು ಹೆಚ್ಚಾಗಿ ಈ ದಂಧೆಗೆ ಸಿಲುಕಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದ ಹಣವನ್ನು ಕೆಲವೇ ಗಂಟೆಗಳಲ್ಲಿ ಕಳೆದುಕೊಳ್ಳುತ್ತಿದ್ದಾರೆ. ₹ 10ರಿಂದ ಇದರ ಆಟ ಆರಂಭವಾಗುತ್ತದೆ. ಕೆಲವು ಆನ್‌ಲೈನ್ ಮಟ್ಕಾ ಗಂಟೆಗೊಮ್ಮೆಯಂತೆ ನಡೆಯುತ್ತವೆ. ಹೀಗಾಗಿ, ಸಾಮಾನ್ಯ ಕೂಲಿಕಾರ್ಮಿಕರೂ ಇದರ ಕಬಂಧ ಬಾಹುವಿಗೆ ಸಿಲುಕಿ ನರಳುತ್ತಿದ್ದಾರೆ.

ಆಟೊಗಳ ಬಳಕೆ:ಇಂತಹ ಆನ್‌ಲೈನ್ ಮಟ್ಕಾ ಆಡಲು ಹೆಚ್ಚಾಗಿ ಆಟೊಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಮೇಲ್ನೋಟಕ್ಕೆ ಪ್ರಯಾಣಿಕರಿಗಾಗಿ ಆಟೊ ನಿಂತಿವೆ ಎಂದು ಅನ್ನಿಸುತ್ತದೆ. ಪ್ರಯಾಣಿಕರು ಕೇಳಿದರೆ ಬರುವುದಿಲ್ಲ ಎನ್ನುತ್ತಾರೆ. ಒಳಗಡೆ 3 ರಿಂದ 4 ಮಂದಿ ಕುಳಿತು ಮೊಬೈಲ್ ಕೈಲಿಡಿದು ಇಂತಹ ಆಟ ಆಡುತ್ತಿರುತ್ತಾರೆ. ಇದು ಗಮನಕ್ಕೆ ಬರುವುದೇ ಇಲ್ಲ.

ಆನ್‌ಲೈನ್ ಮಟ್ಕಾ ಏಕಪ್ರಕಾರದ ಸ್ವರೂಪವನ್ನು ಹೊಂದಿಲ್ಲ. ಇದಕ್ಕೆ ರಾವಣನ ತಲೆಗಳಂತೆ ಹತ್ತಾರು ಸ್ವರೂಪಗಳಿವೆ. ಹಲವು ವೆಬ್‌ಸೈಟ್‌ಗಳು ವಿಭಿನ್ನ ಸ್ವರೂಪದ ಆಟವನ್ನು ಆಡಿಸುತ್ತವೆ. ಇದಕ್ಕೆಲ್ಲ ಏಜೆಂಟರೂ ಇದ್ದಾರೆ. ಬೆಳಿಗ್ಗೆ ಅಥವಾ ಸಂಜೆ ಗ್ರಾಹಕರಿಂದ ಹಣ ಸಂಗ್ರಹಿಸಿ ಸಂಖ್ಯೆಯನ್ನು ಪಡೆದುಕೊಳ್ಳುತ್ತಾರೆ. ನಿರ್ದಿಷ್ಟ ವೆಬ್‌ಸೈಟ್‌ನಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಸಂಖ್ಯೆಗಳು ಬರುತ್ತವೆ. ಗ್ರಾಹಕರು ಹೇಳಿದ ಒಂದು ಅಂಕಿ ಬಂದರೆ ಎಂಟು ಪಟ್ಟು ಜೋಡಿ ಅಂಕಿ ಬಂದರೆ 80 ಪಟ್ಟು ಹಣ ಸಿಗುತ್ತದೆ. ಈ ನಮೂನೆಯಲ್ಲಿ ಪ್ರತಿ ಗಂಟೆಗೊಮ್ಮೆ ಆಡುವ ಆಟಗಳೂ ಇವೆ.

ಆಟೊಗಳ ಬಳಕೆ: ಇಂತಹ ಆನ್‌ಲೈನ್ ಮಟ್ಕಾ ಆಡಲು ಹೆಚ್ಚಾಗಿ ಆಟೊಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಮೇಲ್ನೋಟಕ್ಕೆ ಪ್ರಯಾಣಿಕರಿಗಾಗಿ ಆಟೊ ನಿಂತಿವೆ ಎಂದು ಅನ್ನಿಸುತ್ತದೆ. ಪ್ರಯಾಣಿಕರು ಕೇಳಿದರೆ ಬರುವುದಿಲ್ಲ ಎನ್ನುತ್ತಾರೆ. ಒಳಗಡೆ 3 ರಿಂದ 4 ಮಂದಿ ಕುಳಿತು ಮೊಬೈಲ್ ಕೈಲಿಡಿದು ಇಂತಹ ಆಟ ಆಡುತ್ತಿರುತ್ತಾರೆ. ಇದು ಗಮನಕ್ಕೆ ಬರುವುದೇ ಇಲ್ಲ.

ಆನ್‌ಲೈನ್ ಮಟ್ಕಾ ಏಕಪ್ರಕಾರದ ಸ್ವರೂಪವನ್ನು ಹೊಂದಿಲ್ಲ. ಇದಕ್ಕೆ ರಾವಣನ ತಲೆಗಳಂತೆ ಹತ್ತಾರು ಸ್ವರೂಪ ಗಳಿವೆ. ಹಲವು ವೆಬ್‌ಸೈಟ್‌ಗಳು ವಿಭಿನ್ನ ಸ್ವರೂಪದ ಆಟವನ್ನು ಆಡಿಸುತ್ತವೆ. ಇದಕ್ಕೆಲ್ಲ ಏಜೆಂಟರೂ ಇದ್ದಾರೆ. ಬೆಳಿಗ್ಗೆ ಅಥವಾ ಸಂಜೆ ಗ್ರಾಹಕರಿಂದ ಹಣ ಸಂಗ್ರಹಿಸಿ ಸಂಖ್ಯೆಯನ್ನು ಪಡೆದುಕೊಳ್ಳುತ್ತಾರೆ. ನಿರ್ದಿಷ್ಟ ವೆಬ್‌ಸೈಟ್‌ನಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಸಂಖ್ಯೆಗಳು ಬರುತ್ತವೆ. ಗ್ರಾಹಕರು ಹೇಳಿದ ಒಂದು ಅಂಕಿ ಬಂದರೆ ಎಂಟು ಪಟ್ಟು ಜೋಡಿ ಅಂಕಿ ಬಂದರೆ 80 ಪಟ್ಟು ಹಣ ಸಿಗುತ್ತದೆ. ಈ ನಮೂನೆಯಲ್ಲಿ ಪ್ರತಿ ಗಂಟೆಗೊಮ್ಮೆ ಆಡುವ ಆಟಗಳೂ ಇವೆ.

ಪ್ರಕರಣ ದಾಖಲು; ಬಂಧನ
ನಿಜಕ್ಕೂ ಪೊಲೀಸರಿಗೆ ಈ ದಂಧೆಯ ಕುರಿತು ಅರಿವಿದೆ. ಉದಯಗಿರಿ ಠಾಣಾ ಸರಹದ್ದಿನಲ್ಲಿ 10 ಪ್ರಕರಣಗಳು ದಾಖಲಾಗಿದ್ದು, 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಆಟ ಆಡುವುದಕ್ಕೆ ನಿರ್ದಿಷ್ಟವಾದ ಜಾಗ ಇಲ್ಲದೆ ಇರುವುದು, ಆಟೊಗಳು, ರಸ್ತೆಬದಿಯ ಜಗಲಿಯನ್ನು ಇದಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಪೊಲೀಸರಿಗೆ ಜಾಲ ಭೇದಿಸಲು ಕಬ್ಬಿಣದ ಕಡಲೆ ಎನಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೆಸರು ಹೇಳಲಿಚ್ಛಿಸದ ಉದಯಗರಿ ಠಾಣೆ ಪೊಲೀಸ್ ಅಧಿಕಾರಿಯೊಬ್ಬರು, ‘ಆನ್‌ಲೈನ್ ಮಟ್ಕಾ ಇಲ್ಲ ಎಂದು ಹೇಳುವುದಿಲ್ಲ. ಆದರೆ, ತೀರಾ ಹೆಚ್ಚಾಗಿಲ್ಲ. ಇಂತಹ ಮಟ್ಕಾ ನಡೆಯುತ್ತಿದೆ ಎಂಬ ಮಾಹಿತಿ ಬಂದ ಕೂಡಲೇ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದ್ದಾರೆ. ಕಳೆದ ತಿಂಗಳಷ್ಟೇ ಕೆ.ಎನ್.ಪುರದ ಹರಿಶ್ಚಂದ್ರ ಘಾಟ್ ರಸ್ತೆಯ ಹೋಟೆಲೊಂದರ ಬಳಿ ಮೆಟ್ಟಿಲುಗಳ ಮೇಲೆ ಮಟ್ಕಾ ನಡೆಸುತ್ತಿದ್ದಾಗ ಆರೋಪಿಯೊಬ್ಬನನ್ನು ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂಧಿಸಿದ್ದರು.

ಆಡಿಸುವವರು ಯಾರು?
ಈ ಆನ್‌ಲೈನ್ ಮಟ್ಕಾ ದಂಧೆಯ ರೂವಾರಿ ನಗರದಲ್ಲಿ ಇಲ್ಲ ಎಂಬುದು ನಿಜ. 1962ರಲ್ಲಿ ಮುಂಬೈನಲ್ಲಿ ರತನ್‌ಲಾಲ್ ಕತ್ರಿ ಎಂಬ ವ್ಯಕ್ತಿ ಚೀಟಿ ಮಟ್ಕಾವನ್ನು ಶುರು ಮಾಡಿದ. ನಂತರ, ಇದು ವಿಭಿನ್ನ ಸ್ವರೂಪಗಳನ್ನು ಪಡೆದುಕೊಳ್ಳುತ್ತಾ ಸಾಗಿತು. ಆದರೆ, ಏಜೆಂಟರು ಮಾತ್ರ ಇಲ್ಲಿದ್ದಾರೆ. ಮೂಲಸೂತ್ರಧಾರಿ ಅಥವಾ ಗುಂಪು ಮುಂಬೈನಲ್ಲಿ ಇದೆ. ಇಲ್ಲಿಂದಲೇ ದೇಶದಾದ್ಯಂತ ಆನ್‌ಲೈನ್ ಮಟ್ಕಾ ಕಾರ್ಯಾಚರಿಸುತ್ತಿದೆ. ದಿನಕ್ಕೆ ನೂರಾರು ಮಂದಿ ಮೋಸ ಹೋಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.