ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣವೆಂದರೆ ಬೆಂಗಳೂರಿನ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. ಆದರೆ ಕಳೆದೆರಡು ತಿಂಗಳುಗಳಿಂದ ಈ ಕ್ರೀಡಾಂಗಣವು ಅನಪೇಕ್ಷಿತ ಕಾರಣಗಳಿಂದಾಗಿ ಸುದ್ದಿಯಲ್ಲಿದೆ.

ಹೋದ ಜೂನ್ 4ರ ದುರದೃಷ್ಟಕರ ಘಟನೆಗಳು ಕ್ರೀಡಾಂಗಣದ ಅಸ್ತಿತ್ವವನ್ನೇ ಪ್ರಶ್ನಾರ್ಹವಾಗಿಸಿವೆ. ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ ಪ್ರೀತಿಯ ತಂಡದ ಮೊದಲ ಐಪಿಎಲ್ ವಿಜಯವನ್ನು ಆಚರಿಸಲು ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ ಈ ಸಂದರ್ಭದಲ್ಲಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಇನ್ನೊಂದೆಡೆ ಕ್ರಿಕೆಟ್ ಆಟವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯಗೊಳಿಸುವ ಮತ್ತು ಬೆಂಗಳೂರಿನಿಂದ ಹೊರಗಿನ ನಗರ, ಪಟ್ಟಣಗಳ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಲು ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳಲ್ಲಿ ಕೆಎಸ್ಸಿಎ ಮುಂಚೂಣಿಯಲ್ಲಿತ್ತು. ಅದಕ್ಕಾಗಿಯೇ ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಬೆಳಗಾವಿ ನಗರಗಳಲ್ಲಿ ಸುಸಜ್ಜಿತ ಮೈದಾನಗಳನ್ನು ನಿರ್ಮಿಸಿತ್ತು. ಆದರೆ ಈಗ ಈ ಮಹತ್ವಾಕಾಂಕ್ಷೆಯ ಕ್ರಿಕೆಟ್ ತಾಣಗಳು ಬಿಳಿಯಾನೆಗಳಾಗಿವೆ. ಪ್ರಥಮ ದರ್ಜೆ ಮತ್ತು ಭಾರತ ಎ ತಂಡಗಳ ಪಂದ್ಯಗಳನ್ನು ಆಯೋಜಿಸುವ ಮೇಲ್ದರ್ಜೆಯ ಸೌಲಭ್ಯ ಇರುವ ಈ ಕ್ರೀಡಾಂಗಣಗಳಿಗೆ ಪ್ರತಿವರ್ಷವೂ ನಿಯಮಿತವಾಗಿ ಪಂದ್ಯಗಳನ್ನು ಆಯೋಜಿಸುವ ಅವಕಾಶಗಳು ಸಿಗುತ್ತಿಲ್ಲ. ಸುಮಾರು ₹ 75 ರಿಂದ 85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮೂಲಸೌಲಭ್ಯಗಳು ಇವಾಗಿವೆ. ಇದರಿಂದಾಗಿ ನಿರ್ವಹಣೆ ಕುಂಠಿತವಾಗಿವೆ.

ದೇಶಿ ಕ್ರಿಕೆಟ್ ಪಂದ್ಯಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ನಡೆಸುವ ದೂರದೃಷ್ಟಿಯ ಯೋಜನೆ ಮಾಡಿದ ಕೆಎಸ್ಸಿಎ ಉದ್ದೇಶ ಉತ್ತಮವಾಗಿಯೇ ಆಗಿತ್ತು. ಅದಕ್ಕಾಗಿಯೇ ರಾಜ್ಯದ ಪ್ರಮುಖ ನಾಲ್ಕು ನಗರಗಳಲ್ಲಿ ಕ್ರೀಡಾಂಗಣ ನಿರ್ಮಿಸಿದೆ. ಅದಕ್ಕೆ ಪೂರಕವಾಗಿ ಪ್ರತಿಭಾ ಸಂಪನ್ಯೂಲ ಅಭಿವೃದ್ಧಿ ಘಟಕವು (ಟಿಆರ್ಡಿಒ) ಗ್ರಾಮಾಂತರ ಪ್ರದೇಶಗಳಲ್ಲಿರುವ ಪ್ರತಿಭಾನ್ವಿತ ಕ್ರಿಕೆಟಿಗರನ್ನು ಹುಡುಕಿ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿದೆ. ಬ್ರಿಜೇಶ್ ಪಟೇಲ್ ಅವರು ಕೆಎಸ್ಸಿಎಗೆ ಎರಡನೇ ಬಾರಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಅವಧಿಯಲ್ಲಿ ಅಂದರೆ 2001ರಲ್ಲಿ ಈ ಯೋಜನೆ ಆರಂಭವಾಯಿತು. ಇದರ ಯಶಸ್ಸಿನಿಂದ ಪ್ರೇರಣೆಗೊಂಡ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಷ್ಟ್ರಮಟ್ಟದಲ್ಲಿ ಇಂತಹದೇ ವ್ಯವಸ್ಥೆಯನ್ನು ಜಾರಿಗೆ ತಂದಿತು.

ನಂತರದ ವರ್ಷಗಳಲ್ಲಿ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರು ಸಂಸ್ಥೆಯ ಪದಾಧಿಕಾರಿಗಳಾಗಿ ಆಯ್ಕೆಯಾದರು. ಇದಕ್ಕೂ ಮುನ್ನ ನಿರ್ಮಾಣ ಹಂತದಲ್ಲಿದ್ದ ಹುಬ್ಬಳ್ಳಿ, ಶಿವಮೊಗ್ಗ ಮತ್ತು ಬೆಳಗಾವಿ ಕ್ರೀಡಾಂಗಣಗಳು ಪೂರ್ಣಗೊಂಡು ಕಾರ್ಯಾರಂಭ ಮಾಡಿದವು. ಕೆಲಕಾಲದ ನಂತರ ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಅನ್ನು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಿ ಮತ್ತು ಮೇಲ್ದರ್ಜೆಗೇರಿಸಲಾಯಿತು. ಇಲ್ಲಿ ನಡೆದ ಭಾರತ ಎ ತಂಡದ ಪಂದ್ಯಗಳಲ್ಲಿ ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್ ಮತ್ತು ಚೇತೇಶ್ವರ್ ಪೂಜಾರ ಅವರಂತಹ ಖ್ಯಾತನಾಮರೂ ಆಡಿದ್ದರು. ವಿವಿಧ ಆಡಳಿತಗಾರರ ಅಡಿಯಲ್ಲಿ ಈ ಸುಸಜ್ಜಿತ ಡ್ರೆಸ್ಸಿಂಗ್ ಕೊಠಡಿಗಳು, ಗುಣಮಟ್ಟದ ಹೊರಾಂಗಣಗಳು, ಪ್ರೇಕ್ಷಕರಿಗೆ ಆಸನಗಳು ಮತ್ತು ಅಭ್ಯಾಸ ಸೌಲಭ್ಯಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಷ್ಟೇ ಅಲ್ಲ; ಬಹುತೇಕ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕದಾದ್ಯಂತ 60 ಟರ್ಫ್ ವಿಕೆಟ್ಗಳನ್ನೂ ಅಭಿವೃದ್ಧಿಪಡಿಸಲಾಯಿತು.

ದೇಶಿ ಕ್ರಿಕೆಟ್ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಗ್ರಾಮಾಂತರ ಊರುಗಳ ಮೈದಾನಗಳಲ್ಲಿ ರಣಜಿ ಟ್ರೋಫಿ ಮತ್ತಿತರ ಪ್ರಥಮ ದರ್ಜೆ ಪಂದ್ಯಗಳನ್ನು ಆಯೋಜಿಸಲಾಯಿತು. ಅದರಿಂದಾಗಿ ಸ್ಥಳೀಯ ಜನರಿಗೂ ತಮ್ಮ ನೆಚ್ಚಿನ ಆಟಗಾರರನ್ನು ನೋಡುವ ಅವಕಾಶ ಒದಗಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೇಶಿ ಪಂದ್ಯಗಳು ನಡೆದಾಗ ಸೇರುವ ಅಭಿಮಾನಿಗಳ ಸಂಖ್ಯೆಗಿಂತಲೂ ಗ್ರಾಮಾಂತರ ವಿಭಾಗದ ಮೈದಾನಗಳಲ್ಲಿ ಸೇರುವುದು ಸಹಜ. ರಾಜಧಾನಿಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿರುವುದು ನಿಜ. ವಾಹನ ದಟ್ಟಣೆ, ಕೆಲಸದ ಒತ್ತಡದಿಂದಾಗಿ ಪ್ರತಿ ಪಂದ್ಯಕ್ಕೂ ಮೈದಾನ ಬರಲು ಜನರಿಗೆ ಸಾಧ್ಯವಾಗುವುದಿಲ್ಲ. ಆದರೆ ಸಣ್ಣ ನಗರಗಳಲ್ಲಿ ಸಂಚಾರ ವ್ಯವಸ್ಥೆ ಅಷ್ಟೇನೂ ಕಷ್ಟಕರವಲ್ಲ.

ಆದರೂ, ಕಳೆದ ನಾಲ್ಕು ಋತುಗಳಲ್ಲಿ, ಮೂರು ರಣಜಿ ಟ್ರೋಫಿ ಪಂದ್ಯಗಳನ್ನು ಮಾತ್ರ ಗ್ರಾಮಾಂತರ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿತ್ತು. ಈ ಮೂರೂ ಪಂದ್ಯಗಳೂ 2023-24 ರ ಋತುವಿನಲ್ಲಿ ನಡೆಸದಿದ್ದವು. ಹುಬ್ಬಳ್ಳಿಯಲ್ಲಿ ಎರಡು ಪಂದ್ಯಗಳು ನಡೆದರೆ, ಮೈಸೂರಿನಲ್ಲಿ ಮತ್ತೊಂದು ನಡೆದಿತ್ತು. ಶಿವಮೊಗ್ಗ ಕಳೆದ ವರ್ಷದ ಆರಂಭದಲ್ಲಿ ಸಿ. ಕೆ. ನಾಯ್ಡು ಟ್ರೋಫಿ ಮತ್ತು ಕೆಲವು ಮಹಿಳಾ ಪಂದ್ಯಗಳನ್ನು ಆಯೋಜಿಸಿತ್ತು. ಮೈಸೂರು ಮತ್ತು ಹುಬ್ಬಳ್ಳಿ ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದರೂ, ಮಹಾರಾಜ ಟ್ರೋಫಿ ಟಿ-20 ಕಳೆದ ವರ್ಷ ಬೆಂಗಳೂರಿನಲ್ಲಿ ಮಾತ್ರ ನಡೆಯಿತು.

ಈ ವರ್ಷವೂ, ಇದನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತಿತ್ತು, ಆದರೆ ಪೊಲೀಸರು ಮಹಾರಾಜ ಟ್ರೋಫಿ ಆಯೋಜನೆಗೆ ಅನುಮತಿ ನಿರಾಕರಿಸಿದರು. ಇದರಿಂದಾಗಿ ಟೂರ್ನಿ ಮೈಸೂರಿಗೆ ಸ್ಥಳಾಂತರವಾಯಿತು.

ಈ ಕುರಿತು ಮಾಹಿತಿಗಾಗಿ ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನಕ್ಕೆ ಪ್ರತಿಕ್ರಿಯೆ ದೊರೆಯಲಿಲ್ಲ.

2022-23 ಮತ್ತು 2024-25ರ ಋತುಗಳಲ್ಲಿ ನಡೆದ ರಣಜಿ ಟೂರ್ನಿಯಲ್ಲಿ ಕರ್ನಾಟಕವು ತಲಾ ನಾಲ್ಕು ಪಂದ್ಯಗಳನ್ನು ತವರಿನಲ್ಲಿ ಆಡಿತ್ತು. ಆದರೆ ಅವೆಲ್ಲವೂ ಬೆಂಗಳೂರಿನಲ್ಲಿ ನಡೆದಿದ್ದವು.

‘ನಮಗೆ ಕೆಪಿಎಲ್ (ಮಹಾರಾಜ ಟಿ20) ಅಥವಾ ರಣಜಿ ಟ್ರೋಫಿ ಪಂದ್ಯಗಳು ನೋಡಲು ಸಿಗುವುದಿಲ್ಲ. ಇಲ್ಲಿಯ ಕ್ರೀಡಾಂಗಣದಲ್ಲಿ (ರಾಜನಗರ) ಬಹುತೇಕ ವರ್ಷವಿಡೀ ಯಾವುದೇ ಚಟುವಟಿಕೆ ಇರುವುದಿಲ್ಲ. ಕೆಎಸ್ಸಿಎ ಮಾನ್ಯತೆ ಪಡೆದ ಲೀಗ್ಗಳಲ್ಲಿ ಆಡಿದ ಆಟಗಾರರಿಗೂ ಇಲ್ಲಿ ನೆಟ್ಸ್ನಲ್ಲಿ ಆಡುವ ಅವಕಾಶ ಕೊಡುವುದಿಲ್ಲ. ಸ್ಥಳೀಯರಿಗೆ ಉಪಯೋಗವಾಗದ ಮೇಲೆ ಇಲ್ಲಿ ಸೌಲಭ್ಯಗಳನ್ನು ಯಾಕೆ ಅಭಿವೃದ್ಧಿಪಡಿಸಬೇಕು’ ಎಂದು ಹುಬ್ಬಳ್ಳಿಯ ಹಿರಿಯ ಕೋಚ್ ದಯಾನಂದ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.