ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಮಿಕರಿಗೆ ನೂತನ ಯೋಜನೆ: ಸರ್ಕಾರ ಚಿಂತನೆ

Published 24 ಜೂನ್ 2024, 5:22 IST
Last Updated 24 ಜೂನ್ 2024, 5:22 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಕಾರ್ಮಿಕರ ಕಾರ್ಯಾಚರಣೆ ಪೂರ್ಣಗೊಂಡ ನಂತರ ನೂತನ ಯೋಜನೆ ಜಾರಿಗೊಳಿಸಲು ಸರ್ಕಾರ ಚಿಂತಿಸಿದೆ’ ಎಂದು ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಅಧ್ಯಕ್ಷ ಪಿ.ರಾಜು ತಿಳಿಸಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

‘ನಕಲಿ ಕಾರ್ಮಿಕರ ವಿರುದ್ಧ ಕ್ರಮಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಲ್ಲಿ ಕೋರಿದ್ದೆವು. ಅದರಂತೆ ಕುಟುಂಬದವರ ಎಲ್ಲರ ಆಧಾರ್ ಕಾರ್ಡ್ ಪಡೆದು ಆ ಮೂಲಕ ನಕಲಿ ಕಾರ್ಮಿಕರನ್ನು ಪತ್ತೆ ಹಚ್ಚಿ ತಡೆಗಟ್ಟಬಹುದು ಎಂಬ ಸಲಹೆಯನ್ನು ಸಚಿವರು ಸ್ವೀಕರಿಸಿದ್ದಾರೆ’ ಎಂದರು.

‘ಈ ಹಿಂದೆ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಸಚಿವರು ನಕಲಿ ಕಾರ್ಮಿಕರ ಹಾವಳಿಯಿಂದಾಗಿ ಕಡಿತಗೊಳಿಸಿದ್ದಾರೆ. ನೋಂದಾಯಿಸಿದಾಗ 25.30 ಲಕ್ಷ ಕಾರ್ಮಿಕರು ಇದ್ದರು. ಈಗ ಅದು 50 ಲಕ್ಷ ದಾಟಿರುವ ಕಾರಣ ಪ್ರೋತ್ಸಾಹಧನ ಕಡಿತಗೊಳಿಸಿದ್ದಾರೆ. ಸಂಘ ನವೀಕರಣಗೊಂಡ ನಂತರ ಮುಖ್ಯಮಂತ್ರಿ ಮತ್ತು ಕಾರ್ಮಿಕ ಸಚಿವರನ್ನು ಭೇಟಿಯಾಗಿ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುತ್ತೇವೆ’ ಎಂದು ತಿಳಿಸಿದರು.

ಜಿಲ್ಲಾ ಘಟಕಗಳ ನೂತನ ಅಧ್ಯಕ್ಷರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

ರಾಜ್ಯ ಕಾರ್ಯಾಧ್ಯಕ್ಷೆ ಸುವರ್ಣಮ್ಮ (ದಾವಣಗೆರೆ), ಕಚೇರಿ ಕಾರ್ಯದರ್ಶಿ ಚಂದ್ರಶೇಖರ (ಅಶೋಕಪುರಂ), ಮೈಸೂರು– ನಂಜುಂಡಸ್ವಾಮಿ, ಚಾಮರಾಜನಗರ– ಕುಮಾರಚಾರಿ, ಹಾಸನ– ಲೋಕೇಶ್ ಕುಮಾರ್, ತುಮಕೂರು– ಗುರುಪ್ರಸಾದ್, ದಾವಣಗೆರೆ– ಬಸವರಾಜು, ಬಳ್ಳಾರಿ– ಅಂಜನೇಯ, ಶಿವಮೊಗ್ಗ– ಶ್ವೇತಾ, ಬಾಗಲಕೋಟೆ– ರಾಜಶೇಖರ ಮಂಗಳೂರ, ವಿಜಯಪುರ– ಸಾಗರ್, ಗದಗ– ಬಸಪ್ಪ ಕುರಿ, ಕೊಪ್ಪಳ– ರಾಕೇಶ್, ಕಲಬುರ್ಗಿ– ಚಂದ್ರಕಲಾ ಪಿ.ಪಾಟೀಲ, ಧಾರವಾಡ– ಮಂಜುನಾಥ, ಬೀದರ್– ಸಂತೋಷ ಶಿರಗೇರಿ, ಹಾವೇರಿ– ಜ್ಯೋತಿ ಮಂಜುನಾಥ್, ಮೈಸೂರು– ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಣ್ಣ, ಸುರೇಶ್, ಶಿರಗುಪ್ಪ– ತಾಲ್ಲೂಕು ಅಧ್ಯಕ್ಷ ಶಿವಪ್ಪ, ಕುರಗೋಡು– ತಾಲ್ಲೂಕು ಘಟಕದ ಅಧ್ಯಕ್ಷ ಮೂರ್ತಿ, ಕಂಪ್ಲಿ ತಾಲ್ಲೂಕು ಅಧ್ಯಕ್ಷ ಅಂಜಿನೇಯ, ದಯಾನಂದ ಅವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT