ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನನ್ನು ಯಾರೂ ಅಪಹರಿಸಿಲ್ಲ: ಸಂತ್ರಸ್ತೆಯ ವಿಡಿಯೊ ಹೇಳಿಕೆ

Published 13 ಮೇ 2024, 6:09 IST
Last Updated 13 ಮೇ 2024, 6:09 IST
ಅಕ್ಷರ ಗಾತ್ರ

ಮೈಸೂರು: ಹೊಳೆನರಸೀಪುರ ಶಾಸಕ ಎಚ್‌.ಡಿ. ರೇವಣ್ಣ ಅಪಹರಣ ಮಾಡಿಸಿದ್ದಾರೆ ಎನ್ನಲಾದ ಮಹಿಳೆ ವಿಡಿಯೊ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ಹರಿದಾಡುತ್ತಿದೆ.

2 ನಿಮಿಷ 32 ಸೆಕೆಂಡಿನ ವಿಡಿಯೊದಲ್ಲಿ ಮಹಿಳೆಯು, ‘ನನ್ನನ್ನು ಯಾರೂ ಅಪಹರಿಸಿಲ್ಲ. ರೇವಣ್ಣ ಅಥವಾ ಪ್ರಜ್ವಲ್ ನನಗೆ ತೊಂದರೆ ಕೊಟ್ಟಿಲ್ಲ. ಟಿ.ವಿ. ನೋಡುವಾಗ ದೂರಿನ ವಿಚಾರ ತಿಳಿಯಿತು. ನನ್ನ ಮಗ ತಪ್ಪು ಮಾಹಿತಿಯಿಂದ ದೂರು ಕೊಟ್ಟಿರಬಹುದು. ವಿಶ್ರಾಂತಿಗಾಗಿ ನಾಲ್ಕು ದಿನ ಸಂಬಂಧಿಕರ ಮನೆಗೆ ಬಂದಿದ್ದೇನೆ. ಸದ್ಯದಲ್ಲೇ ಮನೆಗೆ ಬರುತ್ತೇನೆ’ ಎಂದು ಹೇಳಿದ್ದಾರೆ.

ಈ ವಿಡಿಯೊ ಯಾವಾಗಿನದ್ದು, ಎಲ್ಲಿ ಮಾತನಾಡಿದ್ದು, ಈಗ ಹರಡಿಸಿದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.

‘ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿಯನ್ನು ಏ.29ರಂದು ರೇವಣ್ಣ ಸೂಚನೆಯಂತೆ ಸತೀಶ್‌ ಬಾಬಣ್ಣ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಆಕೆಯ ಜೀವಕ್ಕೆ ಅಪಾಯವಿದೆ’ ಎಂದು ಮಹಿಳೆಯ ಮಗ ಕೆ.ಆರ್‌. ನಗರ ಠಾಣೆಯಲ್ಲಿ ದೂರು ನೀಡಿದ್ದ ಮೇರೆಗೆ ಅಪಹರಣ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಎಸ್‌ಐಟಿ ತಂಡವು ಹುಣಸೂರು ತಾಲ್ಲೂಕಿನ ಕಾಳೇನಹಳ್ಳಿ ತೋಟದಲ್ಲಿ ಮಹಿಳೆಯನ್ನು ರಕ್ಷಣೆ ಮಾಡಿತ್ತು. ಬಳಿಕ ನ್ಯಾಯಾಧೀಶರ ಎದುರು ಮಹಿಳೆಯನ್ನು ಹಾಜರುಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT