ಮೈಸೂರು: ವಾಹನ ನಿಲುಗಡೆ ನಿಷೇಧ (ನೋ ಪಾರ್ಕಿಂಗ್)ಕ್ಕೆ ಒಳಗಾದ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ವಾಹನ ನಿಲುಗಡೆ ಇಲ್ಲದ ಪ್ರದೇಶಗಳಲ್ಲಿ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್ ವಾಹನಗಳಿಂದ ತೆಗೆದುಕೊಂಡು ಠಾಣೆಗೆ ಸಾಗಿಸಲಾಗುತ್ತಿತ್ತು. ಇಂತಹ ವಾಹನಗಳ ಮೇಲೆ ವಿಧಿಸಲಾಗುತ್ತಿದ್ದ ದಂಡದ ಮೊತ್ತ ಸರಿಸುಮಾರು ಶೇ 200ಕ್ಕಿಂತಲೂ ಹೆಚ್ಚಾಗಿದೆ. ಈ ಕುರಿತು ರಾಜ್ಯ ಸರ್ಕಾರ ಮಾರ್ಚ್ 3ರಂದು ಪರಿಷ್ಕೃತ ಆದೇಶ ಹೊರಡಿಸಿತ್ತು. ಮಂಗಳವಾರದಿಂದಲೇ ಈ ಆದೇಶವನ್ನು ಜಾರಿಗೆ ತರಲಾಗುವುದು ಎಂದು ನಗರ ಪೊಲೀಸ್ ಕಮೀಷನರ್ ಡಾ.ಎ.ಎಸ್.ಸುಬ್ರಹ್ಮಣ್ಯೇಶ್ವರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಷ್ಕೃತ ದರ

ವಾಹನಗಳ ವಿಧಗಳು

ಹಿಂದಿನ ದಂಡದ ಮೊತ್ತ

ಪರಿಷ್ಕೃತ ದಂಡದ ಮೊತ್ತ

ಭಾರಿ ಸಾಗಣೆ ವಾಹನಗಳು

₹ 600

₹ 1,600

ಮಧ್ಯಮ ಸಾಗಣೆ ವಾಹನಗಳು

₹ 500

₹ 1,350

ಕಾರು, ತ್ರಿಚಕ್ರ, ಟೆಂಪೊ, ಆಟೊ

₹ 400

₹ 1,100

ದ್ವಿ ಚಕ್ರ ವಾಹನಗಳು

₹ 300

₹ 750

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.