ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IFS Exam: ಮೈಸೂರಿನ ಪೂಜಾಗೆ 45ನೇ ರ್‍ಯಾಂಕ್‌

Published 1 ಜುಲೈ 2023, 14:55 IST
Last Updated 1 ಜುಲೈ 2023, 14:55 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಲೋಕಸೇವಾ ಆಯೋಗವು 2022ರ ನವೆಂಬರ್‌ನಲ್ಲಿ ನಡೆಸಿದ್ದ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಪರೀಕ್ಷೆ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಇಲ್ಲಿನ ಕುವೆಂಪುನಗರದ ನಿವಾಸಿ ಎಂ. ಪೂಜಾ 45ನೇ ರ್‍ಯಾಂಕ್‌ ಪಡೆದಿದ್ದಾರೆ.

ಅವರು 2022ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 390ನೇ ರ್‍ಯಾಂಕ್ ಪಡೆದಿದ್ದರು. ಇದೀಗ ಐಎಫ್‌ಎಸ್‌ನಲ್ಲೂ ಯಶಸ್ಸು ಕಂಡು ವಿಶೇಷ ಸಾಧನೆ ಮಾಡಿದ್ದಾರೆ. ಯುಪಿಎಸ್‌ಸಿಯಲ್ಲಿ 2ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದ ಅವರು, ಐಎಫ್‌ಎಸ್‌ನಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತಮ ರ‍್ಯಾಂಕ್‌ ಗಳಿಸಿದ್ದಾರೆ. ಯಾವುದೇ ತರಬೇತಿ (ಕೋಚಿಂಗ್) ಪಡೆಯದೇ, ಸ್ವಪ್ರಯತ್ನದಿಂದ ಸಾಧನೆ ತೋರಿರುವುದು ಅವರ ವಿಶೇಷ.

‘ದಿನಕ್ಕೆ ಕನಿಷ್ಠ 7–8 ಗಂಟೆ ಓದಿಗಾಗಿ ಮೀಸಲಿಟ್ಟಿದ್ದೆ. ಇಂತಿಷ್ಟೇ ಸಮಯ ಓದಬೇಕು ಎನ್ನುವುದಕ್ಕಿಂತ ಇಷ್ಟು ಪಠ್ಯ ಓದಿ ಮುಗಿಸಲೇಬೇಕು ಎನ್ನುವ ಗುರಿ ಇಟ್ಟುಕೊಳ್ಳುತ್ತಿದ್ದೆ. ಆತ್ಮವಿಶ್ವಾಸದಿಂದ ಓದಿದ್ದರಿಂದ ಈ ಸಾಧನೆ ಸಾಧ್ಯವಾಯಿತು’ ಎಂದು ಪೂಜಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಯುಪಿಎಸ್‌ಸಿಯಲ್ಲಿ ಸಿಕ್ಕಿರುವ ರ‍್ಯಾಂಕ್‌ ಆಧರಿಸಿ ನನಗೆ ಐಪಿಎಸ್‌ ಸಿಗುವ ಸಾಧ್ಯತೆ ಇದೆ. ಇದರೊಟ್ಟಿಗೆ ಐಎಫ್ಎಸ್‌ ಅವಕಾಶವೂ ಇದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ’ ಎಂದು ತಿಳಿಸಿದರು.

ಇಲ್ಲಿನ ಮುಕುಂದರಾವ್‌ ಬೇದ್ರೆ ಹಾಗೂ ಎಂ. ಪದ್ಮಾವತಿ ದಂಪತಿ ಪುತ್ರಿಯಾದ ಪೂಜಾ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT