ಎಚ್.ಡಿ.ಕೋಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ ಗುಂಡ್ರೆ ವಲಯದ ಆನೆಕಾಲು ದಾರಿಗಳ ಮೂಲಕ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಣೆ ಮಾಡುತ್ತಿದ್ದ 23 ಜಾನುವಾರುಗಳನ್ನು ರಕ್ಷಿಸಲಾಗಿದೆ.
ಗುಂಡ್ರೆ ವಲಯದ ಉಪವಲಯ ಅರಣ್ಯಾಧಿಕಾರಿ ಮಧುನಾಯ್ಕ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್ ಹಾಗೂ ಸಿಬ್ಬಂದಿ ಮಹೇಶ್, ಬಿ.ಸಿ ರಾಜೇಶ್, ರಾಜಣ್ಣ, ಸಿಂಗರಾಜು, ಶ್ರೀಜೀತ್ ಅವರನ್ನು ಜಾನುವಾರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಪಿಂಜರ್‌ಪೋಲ್‌ಗೆ ಸುರಕ್ಷತೆಗಾಗಿ 23 ಜಾನುವಾರುಗಳನ್ನು ಹಸ್ತಾಂತರಿಸಲಾಗಿದೆ ಎಂದು ಗುಂಡ್ರೆ ವಲಯ ಅರಣ್ಯಾಧಿಕಾರಿ ಬಿ.ಬಿ.ಅಮೃತೇಶ್ ತಿಳಿಸಿದ್ದಾರೆ.