ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ರೋಟರಿ: ಕೊಕ್ಕೊ–ವಾಲಿಬಾಲ್‌ ಟೂರ್ನಿ

Last Updated 9 ಫೆಬ್ರುವರಿ 2023, 6:03 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್‌ ಪೆವಿ ಲಿಯನ್‌ನಲ್ಲಿ ಬುಧವಾರ ಆರಂಭವಾದ ‘ರೋಟರಿ ಐಡಿಯಲ್‌ ಜಾವಾ’ 35ನೇ ಕೊಕ್ಕೊ–ವಾಲಿಬಾಲ್‌ ಟೂರ್ನಿಯಲ್ಲಿ ಸಿದ್ಧಾರ್ಥನಗರದ ಟೆರಿಶಿಯನ್‌ ಹಾಗೂ ಕುವೆಂಪುನಗರದ ಕಾವೇರಿ ಶಾಲೆಗಳು ಪಾರಮ್ಯ ಸಾಧಿಸಿದವು.

ಲೀಗ್‌ ಹಂತದ ಬಾಲಕರ ವಿಭಾಗದ ಕೊಕ್ಕೊ ಪಂದ್ಯಗಳಲ್ಲಿ ಟೆರಿಷಿಯನ್‌ ತಂಡದವರು 12–6 ಪಾಯಿಂಟ್‌ಗಳಿಂದ ಹರಿವಿದ್ಯಾಲಯ ತಂಡವನ್ನು ಮಣಿಸಿದರೆ, ವಿದ್ಯಾವರ್ಧಕ ಶಾಲಾ ತಂಡದವರು 11–3ರಿಂದ ಈಶ್ವರ ವಿದ್ಯಾಲಯ ತಂಡವನ್ನು ಮಣಿಸಿ ಸೆಮಿ ಫೈನಲ್‌ ಪ್ರವೇಶಿಸಿದರು.

ಅಣ್ಣಯ್ಯಪ್ಪ ಭೈರವೇಶ್ವರ ಶಾಲೆ ತಂಡವು 15–13ರಿಂದ ಐಡಿಯಲ್‌ ಜಾವಾ ರೋಟರಿ ಶಾಲೆ, ಶ್ರೀ ಕಾವೇರಿ ಶಾಲೆ ತಂಡದವರು 10–7ರಿಂದ ಶಿಷ್ಕರಿಣಿ ತಂಡದವರನ್ನು ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.

ಕೊಕ್ಕೊ ಟೂರ್ನಿ ಫಲಿತಾಂಶ (ಸೆಮಿಫೈನಲ್‌ ತಲುಪಿದವರು): 14 ವರ್ಷದೊಳಗಿನ ಬಾಲಕರ ವಿಭಾಗ : ಟೆರಿಷಿಯನ್‌, ಅಣ್ಣಯ್ಯಪ್ಪ ಭೈರವೇಶ್ವರ ಶಾಲೆ, ಈಶ್ವರ ವಿದ್ಯಾಲಯ, ಐಡಿಯಲ್‌ ಜಾವಾ ಶಾಲೆ.

17 ವರ್ಷದೊಳಗಿನ ಬಾಲಕರ ವಿಭಾಗ: ಅಣ್ಣಯ್ಯಪ್ಪ ಶಾಲೆ, ಕರ್ನಾಟಕ ಪಬ್ಲಿಕ್‌ ಶಾಲೆ ಕುವೆಂಪು ನಗರ, ಶ್ರೀಕಾವೇರಿ,

ಬಾಲಕಿಯರ ವಿಭಾಗ: ಐಡಿಯಲ್‌ ಜಾವಾ, ಅಣ್ಣಯಪ್ಪ ಭೈರವೇಶ್ವರ, ಕೆ.ಪುಟ್ಟಸ್ವಾಮಿ, ಹರಿವಿದ್ಯಾಲಯ.

ವಾಲಿಬಾಲ್‌ (ಸೆಮಿಫೈನಲ್‌ ತಲುಪಿದವರು): 14 ವರ್ಷದೊಳಗಿನ ಬಾಲಕರ ವಿಭಾಗ: ಐಡಿಯಲ್ ಜಾವಾ ರೋಟರಿ ಶಾಲೆ, ವಿಜಯವಿಠ್ಠಲ, ಶ್ರೀಪರಮಹಂಸ ಶಾಲೆ, ವಿದ್ಯಾವರ್ಧಕ ಶಾಲೆ,

ಬಾಲಕಿಯರ ವಿಭಾಗ: ಟೆರಿಶಿಯನ್, ವಿದ್ಯಾವರ್ಧಕ, ರೋಟರಿ ವೆಸ್ಟ್ ಸರಸ್ವತಿಪುರಂ, ಶ್ರೀಶಾರದಾ ಪಬ್ಲಿಕ್ ಶಾಲೆ,

17 ವರ್ಷದೊಳಗಿನ ಬಾಲಕರ ವಿಭಾಗ: ಗೀತಾ ಭಾರತಿ ಸಿದ್ಧಾರ್ಥ ನಗರ, ಜೆಎಸ್‌ಎಸ್ ಸರಸ್ವತಿಪುರಂ, ವಿಜಯವಿಠ್ಠಲ ಶಾಲೆ, ಮಹರ್ಷಿ ಪಬ್ಲಿಕ್ ಶಾಲೆ,

ಬಾಲಕಿಯರ ವಿಭಾಗ: ರೋಟರಿ ವೆಸ್ಟ್, ಐಡಿಯಲ್‌ ಜಾವಾ ರೋಟರಿ, ವಿಜಯವಿಠ್ಠಲ ಶಾಲೆ, ಬೃಂದಾವನ ಶಾಲೆ.

ಟೂರ್ನಿಯಲ್ಲಿ 46 ಶಾಲೆಗಳ 1260 ಮಕ್ಕಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT