ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌ಗೆ ₹18.98 ಲಕ್ಷ ಲಾಭ

Published : 24 ಸೆಪ್ಟೆಂಬರ್ 2024, 4:24 IST
Last Updated : 24 ಸೆಪ್ಟೆಂಬರ್ 2024, 4:24 IST
ಫಾಲೋ ಮಾಡಿ
Comments

ಮೈಸೂರು: ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌ನಿಂದ 30ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಭಾನುವಾರ ನಡೆಯಿತು.

ಬ್ಯಾಂಕ್‌ ಅಧ್ಯಕ್ಷೆ ಮಂಜುಳಾ ಮಾನಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಮಹಿಳೆಯರ ಪರ ಇರುವ ಏಕೈಕ ಬ್ಯಾಂಕ್ ನಮ್ಮದು. ಇದರ ಅಭಿವೃದ್ಧಿಗೆ ಆಡಳಿತ ಮಂಡಳಿಯ ಸದಸ್ಯೆಯರು ಕಟಿಬದ್ಧರಾಗಿರಬೇಕು’ ಎಂದರು.

‘ಪ್ರಸಕ್ತ ಸಾಲಿನಲ್ಲಿ ₹18.98 ಲಕ್ಷ ನಿವ್ವಳ ಲಾಭ ಬಂದಿದ್ದು, ಇದರಲ್ಲಿ ಅಧಿಕಾರಿಗಳ ಶ್ರಮವಿದೆ. ಬ್ಯಾಂಕ್‌ನಲ್ಲಿ 6 ಸಾವಿರ ಸದಸ್ಯರಿದ್ದಾರೆ’ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಬ್ಯಾಂಕ್‌ ಉಪಾಧ್ಯಕ್ಷೆ ಎಂ ಶಾರದಾ, ನಿರ್ದೇಶಕರಾದ ಎಂ.ವಿ. ಬೃಹದಾಂಬ, ಡಿ. ಗೌರಮ್ಮ, ಡಿ.ಶಿಲಾಕುಮಾರಿ, ಸುಶೀಲಾ ನಂಜಪ್ಪ, ಪ್ರೇಮಾ ಶಂಕರೇಗೌಡ, ಪ್ರಭಾಮಣಿ, ಭಾಗೀರಥಿ, ಪ್ರಭಾ ಸುರೇಂದ್ರ, ಮೋದಾಮಣಿ, ಲತಾ, ಭಾರತಿ, ಕಲ್ಪನಾ, ಗೀತಾ, ಭಾಗೀರಥಿ, ಎಂ.ಎನ್‌. ಮಹಾಲಕ್ಷ್ಮಿ, ಮೀನಾಕ್ಷಿ, ರೂಪಾ ಹಾಗೂ ವ್ಯವಸ್ಥಾಪಕಿ ಸುಮಾ ಎನ್. ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT