ಸಾಲಿಗ್ರಾಮ: ಜಮೀನಿನಲ್ಲಿ ಉಳುಮೆ ಮಾಡು ವೇಳೆ ಪಂಪ್ ಸೆಟ್ಗೆ ಅಳವಡಿಸಿದ್ದ ವಿದ್ಯುತ್ ವೈರ್ ಕಬ್ಬಿಣದ ನೇಗಿಲಿಗೆ ತಗುಲಿ ರೈತನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಸಾಲಿಗ್ರಾಮ ತಾಲ್ಲೂಕಿನ ಸುಬ್ಬೇಗೌಡನ ಕೊಪ್ಪಲು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ನಿವಾಸಿ ಕುಮಾರ್ ಅವರ ಪುತ್ರ ಯುವ ರೈತ ಸಂಜು ಎಸ್.ಕೆ.(23) ಮೃತರು. ಈತ ತಮ್ಮ ಮೂರು ಎಕರೆ ಜಮೀನು ಉಳುಮೆ ಮಾಡಲು ಎತ್ತುಗಳೊಂದಿಗೆ ಹೋಗಿದ್ದರು. ಜಮೀನಿನ ಕೊಳವೆ ಬಾವಿಯ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ನೆಲದಡಿ ಅಳವಡಿಸಿದ್ದ ವಿದ್ಯುತ್ ವೈರ್ ಉಳುಮೆ ಮಾಡುವಾಗ ಕಬ್ಬಿಣದ ನೇಗಿಲಿಗೆ ಆಕಸ್ಮಿಕವಾಗಿ ತಗುಲಿದೆ. ಆಗ ನೆಲಕ್ಕೆ ಬಿದ್ದು ಚೀರಾಡುತ್ತಿದ್ದನ್ನು ನೋಡಿ ಅಕ್ಕ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ರಕ್ಷಣೆಗೆ ಬರುವಷ್ಟರಲ್ಲಿ ಸಂಜು ಪಟ್ಟಿದ್ದ ಎಂದು ಮೃತನ ತಂದೆ ಕುಮಾರ್ ಸಾಲಿಗ್ರಾಮ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಪೋಷಕರಿಗೆ ನೀಡಲಾಗಿದೆ. ಸಾಲಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.