ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಝೂಗೆ ಶ್ರೀಗಂಧ ಮ್ಯೂಸಿಯಂ ಸ್ಥಳಾಂತರ: ಸಚಿವ ಈಶ್ವರ ಖಂಡ್ರೆ

Published 15 ಜೂನ್ 2024, 16:19 IST
Last Updated 15 ಜೂನ್ 2024, 16:19 IST
ಅಕ್ಷರ ಗಾತ್ರ

ಮೈಸೂರು: ನಗರದ ಅರಣ್ಯ ಭವನದ ಶ್ರೀಗಂಧದ ಕೋಟೆಯಲ್ಲಿರುವ ಶ್ರೀಗಂಧ ವಸ್ತುಸಂಗ್ರಹಾಲಯವನ್ನು ಚಾಮರಾಜೇಂದ್ರ ಮೃಗಾಲಯಕ್ಕೆ ಸ್ಥಳಾಂತರಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅನುಮತಿ ನೀಡಿದ್ದಾರೆ.

ತಾಲ್ಲೂಕಿನ ಕೂರ್ಗಳ್ಳಿಯ ‘ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ’ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಆ ವಸ್ತುಸಂಗ್ರಹಾಲಯವನ್ನು ಮೃಗಾಲಯಕ್ಕೆ ಸ್ಥಳಾಂತರಿಸಿದರೆ, ಪ್ರವಾಸಿಗರಿಗೆ ಶ್ರೀಗಂಧದ ಹಿರಿಮೆಯನ್ನು ತಿಳಿಯಲು ಅನುಕೂಲ ಆಗುತ್ತದೆ. ಇದರಿಂದ ಮೈಸೂರಿನ ಖ್ಯಾತಿಯೂ ಹೆಚ್ಚುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸಿರುವ ವನ್ಯಜೀವಿಗಳ ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಆಸ್ಪತ್ರೆಯನ್ನು ಉದ್ಘಾಟಿಸಿದ ಸಚಿವರು, ಅಲ್ಲಿರುವ ವೈದ್ಯಕೀಯ ಸಲಕರಣೆ ಮತ್ತು ಸೌಲಭ್ಯಗಳನ್ನು ವೀಕ್ಷಿಸಿದರು.

ಆವರಣದಲ್ಲಿ ಆನೆಗಳಿಗಾಗಿಯೇ ನಿರ್ಮಿಸಲಾಗಿರುವ ಈಜುಕೊಳದಲ್ಲಿ ಈಜಾಡುತ್ತಿದ್ದ ಆನೆಗಳನ್ನು ವೀಕ್ಷಿಸಿ ಖುಷಿಪಟ್ಟರು.

ಗಾಯಗೊಂಡ ಮತ್ತು ಅತಿ ಉಗ್ರ ಸ್ವಭಾವದ ಹುಲಿ, ಚಿರತೆಗಳನ್ನು ಇಡಲಾಗಿರುವ ಆವರಣವನ್ನು ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT