ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಡಿಮೆಂಟ್ ಅಂಶ ಪತ್ತೆ: ₹ 25 ಕೋಟಿ ಮೌಲ್ಯದ ಬಿಯರ್‌ ಬಾಕ್ಸ್‌ ವಶ

Published 16 ಆಗಸ್ಟ್ 2023, 23:31 IST
Last Updated 16 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿರುವ ಯುನೈಟೆಡ್ ಬ್ರಿವರಿಸ್ ಕಂಪನಿಯು ತಯಾರಿಸಿದ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದ್ದರಿಂದ ₹ 25 ಕೋಟಿ ಮೌಲ್ಯದ 78,678 ಬಿಯರ್‌ ಬಾಕ್ಸ್‌ಗಳನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಜುಲೈ 15ರಂದು ತಯಾರಾದ ‘7ಇ’ ಮತ್ತು ‘7ಸಿ’ ಬ್ಯಾಚ್‌ನ ಕಿಂಗ್‌ ಫಿಶರ್‌ ಸ್ಟ್ರಾಂಗ್‌ ಮತ್ತು ಅಲ್ಟ್ರಾ ಲ್ಯಾಗರ್‌ ಬಿಯರ್‌ಗಳಲ್ಲಿ ಸೆಡಿಮೆಂಟ್‌ ಪತ್ತೆಯಾಗಿತ್ತು. ಈ ಬಗ್ಗೆ ನಂಜನಗೂಡಿನ ಅಬಕಾರಿ ಅಧೀಕ್ಷಕರು ಜು.27ರಂದು ಇಲಾಖೆಯ ಉಪ ಆಯುಕ್ತ ರವಿಶಂಕರ್‌ ಅವರಿಗೆ ಪತ್ರ ಬರೆದು ‘ಪರಿಶೀಲನೆಗಾಗಿ ಬಿಯರ್‌ಗಳನ್ನು ಲ್ಯಾಬ್‌ಗೆ ಕಳುಹಿಸುತ್ತೇವೆ. ವರದಿ ಬರುವವರೆಗೆ ಡಿಪೊಗೆ ಪೂರೈಕೆಯಾಗಿರುವ ಬಿಯರ್‌ ಮಾರಾಟ ತಡೆಹಿಡಿಯಬೇಕು’ ಎಂದು ತಿಳಿಸಿದ್ದರು.

ಆ.2 ರಂದು ಬೆಂಗಳೂರಿನ ರಾಸಾಯನಿಕ ಪರೀಕ್ಷಕರು ಎರಡೂ ಬ್ಯಾಚ್‌ನ ಬಿಯರ್‌ಗಳಲ್ಲಿ ಸೆಡಿಮೆಂಟ್ ಅಂಶ ಇರುವ ಬಗ್ಗೆ ವರದಿ ನೀಡಿ, ‘ಇದು ಮಾನವನ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕ’ ಎಂದು ತಿಳಿಸಿದ್ದರು. ಎಲ್ಲಾ ಜಿಲ್ಲೆಯ ಅಬಕಾರಿ ಉಪ ಆಯುಕ್ತರಿಗೆ ಪತ್ರ ಬರೆದು ತಡೆ ಹಿಡಿಯಲಾದ ಬಿಯರ್‌ಗಳನ್ನು ನಾಶಪಡಿಸಲು ಸೂಚನೆ ನೀಡಿದ್ದೇವೆ’ ಎಂದು ಇಲಾಖೆಯ ಗ್ರಾಮಾಂತರ ಉಪ ಆಯುಕ್ತ ರವಿಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT