ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿ. ನರಸೀಪುರ: ಮುರುಡೇಶ್ವರ ದೇವಾಲಯದಲ್ಲಿ ಶಿವ ದೀಪೋತ್ಸವ ನಾಳೆ

Published 25 ನವೆಂಬರ್ 2023, 14:24 IST
Last Updated 25 ನವೆಂಬರ್ 2023, 14:24 IST
ಅಕ್ಷರ ಗಾತ್ರ

ತಿ. ನರಸೀಪುರ: ಕಾರ್ತಿಕ ಮಾಸದ ಅಂಗವಾಗಿ ತಾಲ್ಲೂಕಿನ ಮಾದಾಪುರ ಸಮೀಪದ ಮುರುಡೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಭಾನುವಾರ ಕೃತಿಕಾ ನಕ್ಷತ್ರದಲ್ಲಿ ಶಿವ ದೀಪೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಬೆಳಿಗ್ಗೆ 6 ಗಂಟೆಯಿಂದ ದೇವರಿಗೆ ರುದ್ರಾಭಿಷೇಕ, ರುದ್ರ ಪಾರಾಯಣ, ಸಹಸ್ರನಾಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಂಜೆ 6 ಗಂಟೆಗೆ ವಿವಿಧ ಪೂಜೆ, ಹೋಮ, ದೀಪ ಪೂಜೆ ಹಾಗೂ ಕೃತಿಕೋತ್ಸವ ನಂತರ ಉತ್ಸವ ನಡೆಯುತ್ತದೆ. ನಂತರ ಪ್ರಸಾದ ವಿನಿಯೋಗ ಇರುತ್ತದೆ ಎಂದು ದೇವಸ್ಥಾನದ ಅರ್ಚಕ ಎಸ್. ಉಮೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT