ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಸಿದ್ದರಾಮಯ್ಯ ಜನ್ಮದಿನ: ಶ್ರಮದಾನ

ಕೆ.ಆರ್.ಆಸ್ಪತ್ರೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ
Published 13 ಆಗಸ್ಟ್ 2024, 4:56 IST
Last Updated 13 ಆಗಸ್ಟ್ 2024, 4:56 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನದ ಪ್ರಯುಕ್ತ ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ವಿವಿಧೆಡೆ ಶ್ರಮದಾನ ಮಾಡಿದರು. ರೋಗಿಗಳಿಗೆ ಬ್ರೆಡ್, ಫಲಾಹಾರ ನೀಡಿದರು.  

ಕೆ.ಆರ್.ಆಸ್ಪತ್ರೆಯಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಆಯೋಜಿಸಿದ್ದ ಸ್ವಚ್ಚತಾ ಶ್ರಮದಾನಕ್ಕೆ ಶಾಸಕ ಕೆ.ಹರೀಶ್‌ಗೌಡ ಚಾಲನೆ ನೀಡಿದರು.

ನಂತರ ಮಾತನಾಡಿ, ‘ಬಡವರು, ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯದ ಏಳಿಗೆಗೆ ಸಿದ್ದರಾಮಯ್ಯ ದುಡಿದಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರು ಶ್ರಮದಾನ ಮೂಲಕ ಜನ್ಮದಿನ ಆಚರಿಸುತ್ತಿರುವುದು ಶ್ಲಾಘನೀಯ’ ಎಂದರು.

ಅಭಿಯಾನದಲ್ಲಿ ಕಾಂಗ್ರೆಸ್‌ನ ವಿವಿಧ ಸಮಿತಿಯ 150 ಮಂದಿ ಪದಾಧಿಕಾರಿಗಳು, ಪಾಲಿಕೆಯ 50 ಪೌರಕಾರ್ಮಿಕರು ಹಾಗೂ ಕೆ.ಆರ್.ಆಸ್ಪತ್ರೆಯ 40 ಸ್ವಚ್ಛತಾ ಸಿಬ್ಬಂದಿಗಳು ಪಾಲ್ಗೊಂಡರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮೈಸೂರು ವೈದ್ಯಕೀಯ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ, ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಕಾಗಲವಾಡಿ ಶಿವಣ್ಣ, ಕೋಟೆ ಎಂ.ಶಿವಣ್ಣ, ಟಿ.ಬಿ.ಚಿಕ್ಕಣ್ಣ, ಮರಿತಿಬ್ಬೇಗೌಡ, ಮೋದಾಮಣಿ, ಕೆಪಿಸಿಸಿ ಸಂಯೋಜಕ ಭಾಸ್ಕರ ಹಾಜರಿದ್ದರು.

ಫಲಾಹಾರ ನೀಡಿಕೆ: ಎನ್.ಆರ್.ಮೊಹಲ್ಲಾದ  ಶ್ರೀನಿವಾಸ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ರೋಗಿಗಳಿಗೆ ಫಲಾಹಾರ ನೀಡಿದರು.

ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಆಸ್ಪತ್ರೆ ಮಾಲೀಕ ಗಂಧನಹಳ್ಳಿ ವೆಂಕಟೇಶ್, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸವರಾಜ್, ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಜಿ.ರಾಘವೇಂದ್ರ, ರವಿಚಂದ್ರ, ಕಡಕೋಳ ಶಿವಲಿಂಗ ಹಾಜರಿದ್ದರು.

ಗಿಡ ನೆಡುವಿಕೆ ಎಚ್‌.ವಿ.ರಾಜೀವ್ ಸ್ನೇಹಬಳಗದ ಸದಸ್ಯರು ಶಾರದಾದೇವಿನಗರದ ಸಿದ್ದರಾಮಯ್ಯ ಮನೆ ಬಳಿ ಅರಳಿ ಗಿಡ ನೆಟ್ಟರು. ಹುಡ್ಕೊ ಕುಮಾರ್ ಮುಖಂಡರಾದ ರಮೇಶ್ ಸತೀಶ್ ರಾಜ್ ಅರಸ್ ನಾಗರಜ್ ಹೊಯ್ಸಳ ಕರ್ನಾಟಕ ಸಂಘದ ರಂಗನಾಥ ರೇವಣ್ಣ ನಾರಾಯಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT