ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯರ ಭವಿಷ್ಯ ಮತ್ತು ಅದೃಷ್ಟ ಎರಡೂ ಗಟ್ಟಿಯಾಗಿದೆ. ಅವರು ರಾಜಕಾರಣದಲ್ಲಿ ಇರುವವರೆಗೂ ಗಟ್ಟಿಯಾಗಿ ಇರುತ್ತಾರೆ’ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ನಗರದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಡಿ.ಕೆ. ಶಿವಕುಮಾರ್ ಸಹ ಒಂದು ದಿನ ಮುಖ್ಯಮಂತ್ರಿ ಆಗುತ್ತಾರೆ. ಆದರೆ ಅದು ಯಾವಾಗ ಎಂದು ಹೇಳಲಾಗದು. ಈಗ ಸಿದ್ದರಾಮಯ್ಯ ಸಿ.ಎಂ. ಆಗಲು ಶಿವಕುಮಾರ್ ಬೆಂಬಲ ನೀಡಿದ್ದಾರೆ. ಹಾಗೆಯೇ ಡಿಕೆಶಿ ಮುಖ್ಯಮಂತ್ರಿ ಆಗಬೇಕಾದರೆ ಸಿದ್ದರಾಮಯ್ಯ ಬೆಂಬಲ ಬೇಕು. ಯಾರೋ ಕೇವಲ ಹತ್ತು ಶಾಸಕರನ್ನು ಇಟ್ಟುಕೊಂಡು ಮುಖ್ಯಮಂತ್ರಿ ಆಗಲು ಆಗದು’ ಎಂದು ಪ್ರತಿಕ್ರಿಯಿಸಿದರು.

ಲೋಕಾಯುಕ್ತ ತನಿಖೆಯಲ್ಲಿ ಸಿದ್ದರಾಮಯ್ಯರಿಗೆ ಕ್ಲೀನ್ಚಿಟ್ ಕುರಿತು ಪ್ರತಿಕ್ರಿಯಿಸಿ ‘ಎಫ್ಐಆರ್ ಆದ ಕೂಡಲೇ ಕೆಲವರು ಸಿದ್ದರಾಮಯ್ಯ ರಾಜೀನಾಮೆ ಕೇಳುತ್ತಿದ್ದರು. ಈ ಆರೋಪಕ್ಕೆ ಸಾಕ್ಷಿ ಇಲ್ಲ ಎಂದು ಲೋಕಾಯುಕ್ತವೇ ಹೇಳಿದೆ. ಈಗ ಏನು ಹೇಳುತ್ತಾರೆ?’ ಎಂದು ಪ್ರಶ್ನಿಸಿದರು. ‘ಎಫ್ಐಆರ್ ಆದ ತಕ್ಷಣ ರಾಜೀನಾಮೆ ಕೇಳುವುದು ತಪ್ಪು ಎಂದು ಹೇಳಿದ್ದೆ. ಅದನ್ನೇ ಮಹಾ ಅಪರಾಧ ಎಂದು ಬಿಂಬಿಸಿದ್ದರು. ಈಗ ಸತ್ಯ ಗೊತ್ತಾಗಿದೆ’ ಎಂದರು.

‘ಲೋಕಾಯುಕ್ತರ ಮೇಲೆ ಪ್ರಭಾವ ಬೀರುವಂತಹದ್ದು ಈ ಪ್ರಕರಣದಲ್ಲಿ ಏನು ಆಗಿಲ್ಲ. ಜಮೀನು ಕಳೆದುಕೊಂಡಿದ್ದಕ್ಕೆ ಪ್ರತಿಯಾಗಿ ನಿವೇಶನ ಕೇಳಿದ್ದರು. ಇಂತಹದ್ದೇ ಕಡೆ ನಿವೇಶನ ಕೊಡಿ ಎಂದು ಕೇಳಿರಲಿಲ್ಲ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಸೇರಿದಂತೆ ಯಾರೂ ಅಧಿಕಾರಿಗಳ ಮೇಲೆ ಪ್ರಭಾವ ಬೀರಿಲ್ಲ’ ಎಂದರು.

‘ಕಾಂಗ್ರೆಸ್ ಸರ್ಕಾರ ಲೋಕಾಯುಕ್ತ ಮುಚ್ಚಿಸಿ, ಎಸಿಬಿ ಮಾಡಿತ್ತು. ಬಿಜೆಪಿ ಮತ್ತೆ ಲೋಕಾಯುಕ್ತಕ್ಕೆ ಶಕ್ತಿ ನೀಡಿತು. ಈಗ ಅದೇ ಲೋಕಾಯುಕ್ತ ಅಧಿಕಾರಿಗಳು ವರದಿ ನೀಡಿದ್ದಾರೆ. ಲೋಕಾಯುಕ್ತ ಒಳ್ಳೆಯ ಕೆಲಸ ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.