ಮೈಸೂರು: ‘ಪಿಎಫ್ಐ ಸಂಘಟನೆ ಕಾಂಗ್ರೆಸ್ ಪಕ್ಷದ ಪಾಪದ ಕೂಸು’ ಎಂದಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಇಲ್ಲಿ ಗುರುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ‘ಹಾಗಾದರೆ ಆರ್ಎಸ್ಎಸ್ ಏನು?’ ಎಂದು ಕೇಳಿದರು.

‘ಆರ್ಎಸ್ಎಸ್ ಬಿಜೆಪಿಯ ಪಾಪದ ಕೂಸು’ ಎಂದು ತಿರುಗೇಟು ನೀಡಿದರು.

‘ಕಾಂಗ್ರೆಸ್ ನಿಷೇಧಿಸಬೇಕು’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಒಂದು ವೇಳೆ ಕಾಂಗ್ರೆಸ್ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸದೇ ಕ್ಷಮಾಪಣಾ ಅರ್ಜಿ ಬರೆಯುತ್ತಾ ಕುಳಿತಿದ್ದರೆ ಅವರು ಇಂದಿಗೂ ಬ್ರಿಟಿಷರ ಗುಲಾಮರಾಗಿಯೇ ಇರಬೇಕಾಗಿತ್ತು ಎನ್ನುವುದನ್ನು ಮರೆಯದಿರಲಿ’ ಎಂದು ಖಾರವಾಗಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.