ಮೈಸೂರು: ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ತಡವಾಗಿತ್ತು ಎಂಬ ಕಾರಣಕ್ಕೆ ಈಗ ಕಾಮಗಾರಿ ಆರಂಭಕ್ಕೆ ತಡ ಮಾಡುವುದು ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ವಿಸ್ತೃತ ಯೋಜನಾ ವರದಿಯನ್ನು ನಾವಿದ್ದಾಗಲೇ ತಯಾರಿಸಿದ್ದೇವೆ. ಈಗ ಕೇಂದ್ರದಿಂದ ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸಬೇಕು ಎಂದು ಇಲ್ಲಿ ಅವರು ಮಂಗಳವಾರ ಸುದ್ದಿಗಾರರಿಗೆ ಹೇಳಿದರು.

ಕಾಮಗಾರಿಗೆ ನ್ಯಾಯಾಲಯದ ಅಡ್ಡಿ ಎಂಬುದೆಲ್ಲ ಸುಳ್ಳು. ಒಂದು ವೇಳೆ ನಾವು ಪಾದಯಾತ್ರೆ, ಪ್ರತಿಭಟನೆ ನಡೆಸದಿದ್ದರೆ ಇವರು ಕಾಮಗಾರಿ ಆರಂಭಿಸುವುದಿಲ್ಲ ಎಂದರು.

ಓದಿ:ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹ: ಕಾಂಗ್ರೆಸ್ನಿಂದ ಪಾದಯಾತ್ರೆ

ಬಿಟ್ ಕಾಯಿನ್ ಪ್ರಕರಣದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದವರು ಯಾರೇ ಇದ್ದರೂ ಮೊದಲು ತನಿಖೆ ಆರಂಭಿಸಬೇಕು. ಅದನ್ನು ಬಿಟ್ಟು ಸರ್ಕಾರ ನನ್ನ ಬಳಿಯೇ ಸಾಕ್ಷ್ಯ ಕೇಳುತ್ತಿದೆ. ಸಾಕ್ಷ್ಯ ಹುಡುಕುವುದು ತನಿಖಾಧಿಕಾರಿಗಳ ಕೆಲಸ. ನನ್ನ ಬಳಿ ಇರುವ ಮಾಹಿತಿಯನ್ನು ಅಗತ್ಯ ಬಿದ್ದರೆ ನ್ಯಾಯಾಲಯಕ್ಕೆ ನೀಡುವೆ. ಸಾಕ್ಷ್ಯ ಸಂಗ್ರಹದ ನಂತರ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರುತ್ತಾರೋ ಇಲ್ಲವೊ ಅದು ಬೇರೆ ವಿಚಾರ. ಅವರೊಂದಿಗೆ ವೇದಿಕೆ ಹಂಚಿಕೊಂಡರೆ ತಪ್ಪೇನು ಎಂದು ಪ್ರಶ್ನಿಸಿದರು.

ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ ಕುರಿತು ಪ್ರಶ್ನಿಸಿದಾಗ ಅವರು ಅದು ಬೇರೆ ವಿಚಾರ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.