ಹತ್ತಿ ಬಳಿಕ ರೇಷ್ಮೆ ಕೃಷಿ ಮತ್ತು ಉದ್ಯಮ ನಮ್ಮ ದೇಶದಲ್ಲಿ ಬೆಳವಣಿಗೆ ಕಾಣುತ್ತಿದೆ. ಭಾರತವು ತಾಂತ್ರಿಕ ನೆರವು ನೀಡುತ್ತಿದ್ದು ತರಬೇತಿಗೆ ಬಂದಿರುವೆ
ಮೊಹಮ್ಮದ್ ಘಾದ್ ನ್ಯೂ ವ್ಯಾಲಿ ಈಜಿಪ್ಟ್
‘400 ಮಂದಿಗೆ ತರಬೇತಿ’
ಮಂಡಳಿಯ ಸಹಾಯಕ ಕಾರ್ಯದರ್ಶಿಯೂ ಆದ ಅಂತರರಾಷ್ಟ್ರೀಯ ರೇಷ್ಮೆ ಸಮಿತಿಯ (ಐಎಸ್‌ಸಿ) ಸಂಯೋಜಕ ಪದ್ಮನಾಭ ನಾಯಕ ಮಾತನಾಡಿ, ‘ಭಾರತೀಯ ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ವಿಶ್ವದ ವಿವಿಧೆಡೆ ರೇಷ್ಮೆ ಅಭಿವೃದ್ಧಿಗೆ ಐಎಸ್‌ಸಿ ಕೈ ಜೋಡಿಸಿದೆ. ಫ್ರಾನ್ಸ್‌ನಲ್ಲಿ 1870ರಲ್ಲಿ ಆರಂಭವಾದ ಸಮಿತಿಯು 2013ರಲ್ಲಿ ಬೆಂಗಳೂರಿಗೆ ಮುಖ್ಯ ಕಚೇರಿಯನ್ನು ಸ್ಥಳಾಂತರಿಸಿತು. ದೇಶದಲ್ಲಿ ರೇಷ್ಮೆ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯೇ ಇದಕ್ಕೆ ಕಾರಣ’ ಎಂದರು. ‘ಕೃಷಿ ಮತ್ತು ಜವಳಿ ಉದ್ಯಮಗಳ ಪ್ರಗತಿಯಲ್ಲಿ ರೇಷ್ಮೆಯೂ ಪ್ರಮುಖ ಪಾತ್ರವಹಿಸಿದೆ. ತೃತೀಯ ಜಗತ್ತಿನ ದೇಶಗಳಿಗೆ ಭಾರತವೂ ನೆರವಾಗುವ ಮೂಲಕ ವಿಶ್ವದ ಆರ್ಥಿಕತೆಗೆ ಹೆಗಲಾಗಿದೆ. ಈ ಬಾರಿ 47 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 30 ಮಂದಿ ಮಾತ್ರ ಅವಕಾಶ ನೀಡಲಾಗಿದೆ. ಇದುವರೆಗೂ 400ಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಲಾಗಿದೆ’ ಎಂದರು.