ಮೈಸೂರು: ದಿ ಮೈಸೂರು ಸಿಟಿ ಶಿವಛತ್ರಪತಿ ಕೋ- ಅಪರೇಟಿವ್ ಸೊಸೈಟಿ 2023-24ನೇ ಸಾಲಿನಲ್ಲಿ ₹1.47 ಲಕ್ಷ ಲಾಭ ಗಳಿಸಿದ್ದು, ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಕೆ.ನಾಗೇಂದ್ರರಾವ್ (ಅವತಾಡೆ) ಹೇಳಿದರು.
ಡಿ.ದೇವರಾಜ ಅರಸು ರಸ್ತೆಯ ಲೋಕಾಭಿರಾಮ ಮಂದಿರದಲ್ಲಿ ನಡೆದ ಸೊಸೈಟಿಯ 2023-24ನೇ ಸಾಲಿನ 94ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಕಟ್ಟಡದಲ್ಲಿ ಚೇರ್ ಹಾಗೂ ಗ್ರಿಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಪಾರದರ್ಶಕತೆ ಕಾಪಾಡಲು ಆನ್‌ಲೈನ್ ವ್ಯವಸ್ಥೆ ಅಳವಡಿಸಲಾಗಿದೆ. 2800 ಸದಸ್ಯರ ಹಿತ ಕಾಯಲು ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಎಸ್ಎಸ್ಎಲ್‌ಸಿ, ಪಿಯುಸಿ ಹಾಗೂ ಪದವಿಯ 17 ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ನೀಡಲಾಯಿತು.
ಉಪಾಧ್ಯಕ್ಷ ಕೃಷ್ಣಾಜಿರಾವ್ ಗಾಯಕ್‌ವಾಡ್, ನಿರ್ದೇಶಕರಾದ ಎಸ್.ವೆಂಕೋಬರಾವ್ ಕಿರ್ ದಂತ್, ಸುನೀಲ್ ಎಸ್.ಸಂಕಪಾಳ್, ಹರಿರಾವ್ ಸಿಂಧೆ, ಜಿ.ಸುರೇಶ್ ಬಾಬು, ಎಂ.ಎನ್.ತುಕರಾಮ್ ರಾವ್, ವಿ.ಮೀರಾಬಾಯಿ ಕೇಸರ್ಕ್‌ರ್, ವನಿತಾ ಬಾಯಿ, ಕಾರ್ಯದರ್ಶಿ ಸುನೀತಾ, ಸಿಬ್ಬಂದಿ ಕಿರಣ್ ಇದ್ದರು.