ಬೆಂಗಳೂರು: ಗ್ಲೋಬಲ್ ಸ್ವಿಮ್ ಸೆಂಟರ್ ಮತ್ತು ಬಸವನಗುಡಿ ಅಕ್ವಾಟಿಕ್ ಸೆಂಟರ್ ತಂಡಗಳು ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿ ನಡೆದ ಎನ್‌ಆರ್‌ಜೆ ರಾಜ್ಯ ಅಕ್ವಾಟಿಕ್ ಚಾಂಪಿಯನ್‌ಷಿಪ್‌ನ ವಾಟರ್ ಪೋಲೊ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಮುಡಿಗೇರಿಸಿಕೊಂಡವು.
ಇಲ್ಲಿನ ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಮಲ್ಲೇಶ್ವರಂ ಸ್ವಿಮ್ಮಿಂಗ್ ಕ್ಲಬ್ ಮತ್ತು ಬಸವನಗುಡಿ ಅಕ್ವಾಟಿಕ್ ಸೆಂಟರ್ ತಂಡಗಳು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದವು.
ಮಹಿಳೆಯರ ವಿಭಾಗದಲ್ಲಿ ನೆಟ್ಟಕಲ್ಲಪ್ಪ ಈಜುಕೇಂದ್ರ ಮತ್ತು ಮಲ್ಲೇಶ್ವರಂ ಸ್ವಿಮ್ಮಿಂಗ್ ಕ್ಲಬ್ ತಂಡಗಳು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದವು.
ಪುರುಷರ ವಿಭಾಗದಲ್ಲಿ ಮಲ್ಲೇಶ್ವರಂ ತಂಡದ ಎಸ್. ಸೋಹನ್, ಮಹಿಳಾ ವಿಭಾಗದಲ್ಲಿ ಬಸವನಗುಡಿ ತಂಡದ ಪ್ರಚೇತಾ ಆರ್. ರಾವ್ ‘ಬೆಸ್ಟ್ ಪ್ಲೇಯರ್ಸ್’ ಪ್ರಶಸ್ತಿ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.