ಮೈಸೂರು: ‘ಕೆ.ಆರ್ ಆಸ್ಪತ್ರೆ ಆವರಣದ ಚಲುವಾಂಬ ಆಸ್ಪತ್ರೆಯಲ್ಲಿ ಸೂಕ್ತ ನಿರ್ವಹಣೆ ಮಾಡದ ಆರೋಪದಲ್ಲಿ ಸ್ಟಾಫ್ ನರ್ಸ್ ಸೇರಿದಂತೆ ಮೂವರು ಸಿಬ್ಬಂದಿ ಅಮಾನತುಗೊಳಿಸಲು ಆಡಳಿತ ಮಂಡಳಿಗೆ ಸೂಚಿಸಲಾಗಿದೆ’ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ತಿಳಿಸಿದರು.

ಚಲುವಾಂಬ ಆಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜುಲೈ ತಿಂಗಳಲ್ಲಿ ಚಲುವಾಂಬ ಆಸ್ಪತ್ರೆಗೆ ಭೇಟಿ ನೀಡಿ ಕೆಲವೊಂದು ಲೋಪದೋಷಗಳನ್ನು ಗುರುತಿಸಲಾಗಿತ್ತು. ಅಲ್ಲದೇ ಕೆಲವು ಮಾರ್ಪಾಡು ಮಾಡಿಕೊಳ್ಳಲು ಸಲಹೆ ನೀಡಲಾಗಿತ್ತು. ಆ ಬಗ್ಗೆ ಪರಿಶೀಲಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದು, ಕೆಲ ವ್ಯವಸ್ಥೆಗಳು ಸುಧಾರಣೆಯಾಗಿವೆ. ಆದರೆ ಕುಡಿಯುವ ನೀರು, ವಾರ್ಡ್ಗಳಲ್ಲಿ ಸ್ವಚ್ಚತೆ, ಶೌಚಾಲಯ ನಿರ್ವಹಣೆಯಲ್ಲಿ ಅವ್ಯವಸ್ಥೆ ಕಂಡುಬಂದಿದೆ. ತಿಂಗಳೊಳಗೆ ಅವನ್ನು ಸರಿಪಡಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ಕೆ.ಆರ್. ಆಸ್ಪತ್ರೆ ಆವರಣದ ಹಳೆ ಜಯದೇವ ಕಟ್ಟಡದ ವಾರ್ಡ್ಗಳಿಗೆ ತೆರಳಿದ ಅವರು, ಶೌಚಾಲಯಗಳು, ಅವುಗಳಲ್ಲಿ ನೀರಿನ ವ್ಯವಸ್ಥೆ, ವಾರ್ಡ್ಗಳಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ಗುರುತಿಸಿದರು. ಕೆಲ ನಲ್ಲಿಗಳಲ್ಲಿ ನೀರು ಬರುತ್ತಿರಲಿಲ್ಲ. ಹೀಗಾಗಿ ಪ್ರತಿ ವಾರ್ಡ್ನಲ್ಲಿಯೂ ಒಳ ರೋಗಿಗಳಿಗೆ ಹತ್ತಿರದಲ್ಲೇ ಲಭ್ಯವಾಗುವಂತೆ ಕುಡಿಯುವ ನೀರಿನ ಕ್ಯಾನ್ಗಳ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಕೆಲವು ಶೌಚಾಲಯಗಳಲ್ಲಿ ನೀರು ಸೋರಿಕೆಯಾಗುತ್ತಿರುವುದು, ಮತ್ತೆ ಕೆಲವು ದುರಸ್ತಿಯಾಗದಿರುವುದನ್ನು ಕಂಡು ಗರಂ ಆದ ಆಯೋಗದ ಅಧ್ಯಕ್ಷರು, ‘ಕೂಡಲೇ ಶೌಚಾಲಯದಲ್ಲಿ ನೀರು ಸೋರಿಕೆಯಾಗುವುದನ್ನು ನಿಲ್ಲಿಸಲು ಕ್ರಮವಹಿಸಬೇಕು. ಸೊಳ್ಳೆಗಳ ಉತ್ಪತ್ತಿಯಾಗುವುದೇ ಇಂತಹ ಶೌಚಾಲಗಳಲ್ಲಿ, ಸ್ವಚ್ಛತೆಗೆ ಕ್ರಮವಹಿಸಬೇಕು’ ಎಂದು ಸಲಹೆ ನೀಡಿದರು.

ಕೆ.ಆರ್.ಆಸ್ಪತ್ರೆಯ ಆಹಾರ ತಯಾರಿಕಾ ಘಟಕ (ಪಾಕಶಾಲೆ)ಕ್ಕೆ ಭೇಟಿ ನೀಡಿ, ಒಳರೋಗಿಗಳಿಗೆ ತಯಾರಿಸುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು.

‘ಹಿಂದೆ ಭೇಟಿ ನೀಡಿದಾಗ ಆಹಾರ ತಯಾರಿಸುವ ಶ್ರೀ ಜಗದೀಶ್ ಟ್ರೇಡಿಂಗ್ ಕಂಪನಿಗೆ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಅದರಂತೆ ಆಹಾರ ತಯಾರಿಕೆಗೆ ಬಳಸುವ ತರಕಾರಿ, ನೀರು, ಬಾಣಂತಿಯರಿಗೆ ನೀಡುವ ಮೊಟ್ಟೆ ಸೇರಿದಂತೆ ಇನ್ನಿತರೆ ಆಹಾರ ದಾನ್ಯಗಳ ಗುಣಮಟ್ಟದಲ್ಲಿ ಸುಧಾರಣೆಯಾಗಿದೆ. ಈ ರೀತಿ ತಯಾರಾದ ಆಹಾರ ತಾಜಾ ಇರುವಾಗಲೇ ಒಳ ರೋಗಿಗಳಿಗೆ ವಿತರಣೆಯಾಗಬೇಕು. ವೇಳಾಪಟ್ಟಿ ಪ್ರಕಾರವೇ ಊಟ ವಿತರಿಸಿ’ ಎಂದು ಸಲಹೆ ನೀಡಿದರು.

ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಬಾಣಂತಿಯರ ವಾರ್ಡ್ಗಳಲ್ಲಿನ ಸ್ವಚ್ಚತೆ, ಶೌಚಾಲಯ, ಸಿಬ್ಬಂದಿ ಕರ್ತವ್ಯ ನಿರ್ವಹಣೆ ಬಗ್ಗೆಯೂ ಪರಿಶೀಲಿಸಿ ಮಾಹಿತಿ ಪಡೆದರು.

ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಶೋಭಾ, ಆರ್ಎಂಒ ನಯಾಜ್ ಪಾಷಾ, ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸುಧಾ, ಎಂಎಂಸಿ ಆಂಡ್ ಆರ್ಐ ಆಡಳಿತಾಧಿಕಾರಿ ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.