ತಿ.ನರಸೀಪುರ: ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಂಡುಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರೈತರು ತಾಲ್ಲೂಕು ಅಧಿಕಾರಿಗಳನ್ನು ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಹಸೀಲ್ದಾರ್ ಸುರೇಶ್ಚಾರ್ ಅಧ್ಯಕ್ಷತೆಯಲ್ಲಿ ನಡೆದ ರೈತರ ಕುಂದುಕೊರತೆ ಸಭೆಯಲ್ಲಿ ರೈತರು ಅನೇಕ ದೂರುಗಳ ಪ್ರಸ್ತಾಪಿಸಿ ಈ ಒತ್ತಾಯ ಮಾಡಿದರು.

ಕೃಷಿ ಚಟುವಟಿಕೆಗಳ ವೆಚ್ಚಕ್ಕೆ ಬ್ಯಾಂಕ್ಗಳಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದು ಬೇಸಾಯ ಮಾಡುತ್ತಾರೆ. ಅದರೆ ಈಗ ಬಡ್ಡಿ ಪಾವತಿಸಿಕೊಂಡು ಮರುಸಾಲ ನೀಡಲು ಬ್ಯಾಂಕ್ ಅಧಿಕಾರಿಗಳು ಸಹಕರಿಸುತ್ತಿಲ್ಲ ಹಾಗೂ ಪೂರ್ಣ ಅಸಲು ಹಾಗೂ ಬಡ್ಡಿ ಕಟ್ಟುವಂತೆ ಒತ್ತಾಯಿಸುತ್ತಾರೆ ಇದರಿಂದ ರೈತರಿಗೆ ಒಂದೇ ಕಂತಿನಲ್ಲಿ ಕಟ್ಟುವುದು ಕಷ್ಟವಾಗಿದೆ ಎಂದು ಸಭೆಯಲ್ಲಿ ಮುಖಂಡ ಕಿರಗಸೂರು ಶಂಕರ್ ಹೇಳಿದರು.

ಜೂನ್, ಜುಲೈ ತಿಂಗಳಲ್ಲಿ ನಾಲೆಗಳಿಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಆಗಸ್ಟ್ ಕೊನೆ ವಾರಗಳಲ್ಲಿ ನೀರು ಬಿಡುವುದರಿಂದ ಭತ್ತದ ನಾಟಿ ಮಾಡಲು ವಿಳಂಬದ ಜೊತೆಗೆ ಫಸಲು ಇಳುವರಿಗೂ ತೊಂದರೆಯಾಗುತ್ತದೆ ಎಂದು ಅವರು ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಸುರೇಶ್ಚಾರ್, ದೂರವಾಣಿಯ ಮೂಲಕ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚಿಸಿ ನಂತರ ಮೇ.15 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯವನ್ನು ಪ್ರಸಾಪಿಸುವುದಾಗಿ ತಿಳಿಸಿದರು.

ಕೆ.ಆರ್,ಎಸ್ ಉಪ ವಿಭಾಗದ ಮಾದೇಗೌಡನಹುಂಡಿ ಶಾಖೆ ಎಇಇ ಲೋಕನಾಥ್ ಮಾತನಾಡಿ, ಉತ್ತಮ ಮಳೆಯಾಗಿ ಅಣೆಕಟ್ಟೆಗಳು ಭರ್ತಿಯಾದ ನಂತರ ಮೇರ್ಲ್ವದ ಅಧಿಕಾರಿಗಳು ಸಭೆ ನಡೆಸಿ ನಾಲೆಗಳಿಗೆ ನೀರು ಹರಿಸಲಾಗುವುದು ಎಂದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕರೊಹಟ್ಟಿ ಕುಮಾರಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಚಿಕ್ಕ ಮಕ್ಕಳು ಮದ್ಯ ವ್ಯಸನಿಗಳಾಗುವ ಪರಿಸ್ಥಿತಿ ಬಂದಿದೆ. ನಾಲೆ ಬದಿಗಳಲ್ಲಿ ಮದ್ಯದ ಬಾಟಲುಗಳನ್ನು ಬಿಸಾಡುತ್ತಿರುವುದು ಇದರ ನಿಯಂತ್ರಣಕ್ಕೆ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ನಿಯಂತ್ರಿಸಬೇಕಿದೆ ಎಂದರು.

ಅಬಕಾರಿ ಉಪ ನಿರೀಕ್ಷಕರು ಸುಧಾರಾಣಿ ಮಾತನಾಡಿ, ಈಗಾಗಲೇ ಅಕ್ರಮ ಮಾರಾಟ ಮಾಡುವ ದೂರುಗಳ ಬಂದ ಕಡೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ, ೧೦ ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಉತ್ತರಿಸಿದ ತೋಟಗಾರಿಕೆ ಸಹಾಯಕ ನಿರ್ದೇಶಕಿ ಶಾಂತ ಮಾತನಾಡಿ, ರೈತರು ತರಕಾರಿ ಹಣ್ಣು ಮಾರಾಟ ಮಾಡಲು ಜಿಲ್ಲಾ ಹಾಪ್ಕಾಪ್ಸ್ ನಲ್ಲಿ ಆರ್ಟಿಸಿಯನ್ನು ನೋಂದಾಯಿಸಿ ನಂತರ ಖರೀದಿಸಲಾಗುತ್ತದೆ ಎಂದರು.

ರಾಜ್ಯ ಕಬ್ಬು ಬೆಳೆಗಾರ ಸಂಘ ಮುಖಂಡರಾದ ಉಮೇಶ್, ಕುರುಬೂರು ಪ್ರದೀಪ್, ರಾಜೇಶ್, ಯೋಗೇಶ್, ಪ್ರಸಾದ್ನಾಯಕ್, ರೈತ ಸಂಘದ ಕಾರ್ಯದರ್ಶಿ ಬೂದಹಳ್ಳಿ ಶಂಕರ್,ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್, ಚಿನ್ನಸ್ವಾಮಿ, ಕೃಷ್ಣಪ್ಪ, ರವಿ , ತಾಲೂಕು ಮಟ್ಟದ ಅಧಿಕಾರಿಗಳಾದ ಇಒ ಅನಂತರಾಜು, ಸಿಪಿಐ ಧನಂಜಯ, ಪ್ರಭಾರ ಕೃಷಿ ಸಹಯಕ ನಿರ್ದೇಶಕ ಕೆ.ಎಸ್ ರವಿ, ಪುರಸಭೆ ಮುಖ್ಯಧಿಕಾರಿ ವಸಂತಕುಮಾರಿ, ಬನ್ನೂರು ಪುರಸಭೆ ಮುಖ್ಯಧಿಕಾರಿ ಹೇಮಂತ್ ಕುಮಾರ್, ಟಿಎಚ್ಒ ಡಾ.ರವಿಕುಮಾರ್, ಸಾಮಾಜಿಕ ಅರಣ್ಯ ಅರಣ್ಯಾಧಿಕಾರಿ ವಲಯ ಅಧಿಕಾರಿ ಯಮುನಾ, ಸೆಸ್ಕ್ ವೀರೇಶ್ ಸೇರಿದಂತೆ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.