ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿ.ನರಸೀಪುರ | ಆಟೊ ಮಗುಚಿ ಶಾಲಾ ಮಕ್ಕಳಿಗೆ ಗಾಯ

Published 26 ಜೂನ್ 2023, 15:37 IST
Last Updated 26 ಜೂನ್ 2023, 15:37 IST
ಅಕ್ಷರ ಗಾತ್ರ

ತಿ.ನರಸೀಪುರ: ಶಾಲಾ ಮಕ್ಕಳಿದ್ದ ಆಟೊವೊಂದು‌ ಮಗುಚಿ‌ 10 ಮಕ್ಕಳು ಗಾಯಗೊಂಡಿರುವ ಘಟನೆ ಕೊಳ್ಳೇಗಾಲ ಮುಖ್ಯ ರಸ್ತೆಯ ಆಲಗೂಡು ಸಮೀಪದ ಪಟ್ಟಲದಮ್ಮ‌ ದೇವಾಲಯದ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.

ತಾಲ್ಲೂಕಿನ ಕರೋಹಟ್ಟಿ, ಕೇತಹಳ್ಳಿ ಗ್ರಾಮಗಳಿಂದ ಶಾಲೆಗಳಿಗೆ ದಿನವೂ ಮಕ್ಕಳು ಆಟೊದಲ್ಲಿ ಬರುತ್ತಾರೆ. ಇಂದು ಕೂಡ ಶಾಲೆಗೆ ಬರುವ ವೇಳೆ ಅವಘಡವಾಗಿದ್ದು, ಅದರಲ್ಲಿದ್ದ ಕೇತಹಳ್ಳಿ ಗ್ರಾಮದ ರಾಘವೇಂದ್ರ, ಹೇಮಾವತಿ ಸೇರಿದಂತೆ 9 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ತಕ್ಷಣವೇ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಘಟನೆಯ ಸಂಬಂಧ ಆಟೊ ಚಾಲಕನ‌ ವಿರುದ್ಧ ಕ್ರಮಕ್ಕೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT