ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾಯೂರು ವಿಠ್ಠಲಮೂರ್ತಿ ನಿಧನ

Published 9 ಜುಲೈ 2024, 4:17 IST
Last Updated 9 ಜುಲೈ 2024, 4:17 IST
ಅಕ್ಷರ ಗಾತ್ರ

ಮೈಸೂರು: ಹೋರಾಟಗಾರ ತಾಯೂರು ವಿಠ್ಠಲಮೂರ್ತಿ (75) ಇಲ್ಲಿನ ಅಗ್ರಹಾರದ‌ ನಿವಾಸದಲ್ಲಿ ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಕಳೆದ ಐದು ದಶಕದಿಂದ ಕನ್ನಡ ಚಳವಳಿ ಸೇರಿದಂತೆ ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು‌. ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ನೌಕರರಾಗಿ ನಿವೃತ್ತರಾಗಿದ್ದರು.

'ಶಂಭುಲಿಂಗೇಶ್ವರ ಪ್ರೆಸ್'ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು, ಕೃಷ್ಣರಾಜ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ಸ್ವಗ್ರಾಮ ತಿ.ನರಸೀಪುರದ ತಾಯೂರಿನ ಜಮೀನಿನಲ್ಲಿ ಇಂದು ಮಧ್ಯಾಹ್ನ 2ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT