ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೂನ್‌ 2ರವರೆಗೆ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯಲಿರುವ ಎಚ್‌ಡಿಕೆ ಕುಟುಂಬ

Published 31 ಮೇ 2024, 23:43 IST
Last Updated 31 ಮೇ 2024, 23:43 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ತಾಲ್ಲೂಕಿನ ಬೀರಂಬಳ್ಳಿ ಗ್ರಾಮದಲ್ಲಿರುವ ಎವಾಲ್ವ್‌ ಬ್ಯಾಕ್ ಕಬಿನಿ ಕುರುಬ ಸಫಾರಿ ಲಾಡ್ಜ್ (ಆರೆಂಜ್ ಕೌಂಟಿ)ನಲ್ಲಿ ತಂಗಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತು ಕುಟುಂಬದವರು ಇನ್ನೂ ಎರಡು ದಿನ ಇಲ್ಲೇ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.

ಬುಧವಾರ ತಡ ರಾತ್ರಿ ಆಗಮಿಸಿದ್ದ ಅವರು ನಿಗದಿತ ಕಾರ್ಯಕ್ರಮದ ಅನುಸಾರ ಶುಕ್ರವಾರ ಬೆಳಿಗ್ಗೆ ರೆಸಾರ್ಟನಿಂದ ಹೊರಡಬೇಕಿತ್ತು. ಆದರೆ ಇತರ ಕಾರ್ಯಕ್ರಮಗಳನ್ನು ರದ್ದು ಪಡಿಸಿದ್ದು, ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್, ಸೊಸೆ ಮತ್ತು ಮೊಮ್ಮಗನೊಂದಿಗೆ ಜೂನ್ 2ರ ತನಕ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಆರೆಂಜ್ ಕೌಂಟಿಯಿಂದ ಕಬಿನಿ ಹಿನ್ನೀರಿನಲ್ಲಿ ಪ್ರಸಿದ್ದ ಜಂಗಲ್ ಲಾಡ್ಜಸ್‌ಗೆ ಬಂದ ಅವರು, ಇಲ್ಲಿನ ಸಿಬ್ಬಂದಿಯೊಂದಿಗೆ ಪೋಟೊ ಕ್ಲಿಕ್ಕಿಸಿಕೊಂಡು, ನಂತರ ಸಫಾರಿಗೆ ತೆರಳಿದ್ದಾರೆ.

ಗುರುವಾರದಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ.ಕುಪ್ಪೆ ವನ್ಯ ಜೀವಿ ವಲಯದದಲ್ಲಿ ಹುಲಿಯನ್ನು ನೋಡಿ ಸಂಭ್ರಮಿಸಿದ್ದರು.

ಸಫಾರಿ ನಡುವೆ ಕಾರಾಪುರ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ಕುಮಾರಸ್ವಾಮಿ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT