ತಿ.ನರಸೀಪುರ: ಶಾಂತಿಯ ಬದುಕಿನ ಸಂದೇಶ ಸಾರಿದ ಗೌತಮ ಬುದ್ಧ ಪ್ರಪಂಚದ ಜ್ಞಾನದ ಬೆಳಕು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಕೂಡ್ಲೂರು ನಳಂದ ಬುದ್ಧ ವಿಹಾರದಲ್ಲಿ ಸೋಮವಾರ ಗೌತಮ ಬುದ್ಧ ಎಜುಕೇಶನಲ್ ಅಂಡ್ ಕಲ್ಚರಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರ ಮಾತನಾಡಿದರು. ಬುದ್ಧನ ಚಿಂತನೆಗಳು, ವೈಚಾರಿಕತೆ ಶ್ರೇಷ್ಠ ಬದುಕಿಗೆ ಪೂರಕವಾಗಿವೆ. ಪಂಚಶೀಲ ತತ್ವವನ್ನು ಪ್ರತಿಯೊಬ್ಬರೂ ಪಾಲಿಸಿದರೆ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ನಳಂದ ಬುದ್ಧ ವಿಹಾರ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚುವರಿ ಅನುದಾನವನ್ನು ದೊರಕಿಸುವ ಭರವಸೆ ನೀಡಿದರು.

ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಬುದ್ಧ ವಿಹಾರಗಳಲ್ಲಿ ಧ್ಯಾನಕ್ಕೆ ಎಲ್ಲಾ ಸಮುದಾಯಗಳು ಪಾಲ್ಗೊಳ್ಳಬೇಕು. ದಮ್ಮದ ಆಶಯಗಳನ್ನು ಜನರಿಗೆ ತಲುಪಿಸುವ ಕಾರ್ಯವಾಗಬೇಕು ಎಂದರು.

ಬಿಎಸ್ಪಿ ಉಸ್ತುವಾರಿ ನಾಯಕ ಗಂಗಾಧರ್ ಬಹುಜನ್ ಮಾತನಾಡಿದರು. ಬುದ್ಧ ವಿಹಾರದ ಭಂತೇ ಬೋದಿರತ್ನ ಆಶೀರ್ವಚನ ನೀಡಿದರು. ತಾಲ್ಲೂಕು ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ದಮ್ಮ ಸಂದೇಶ ನಡೆಯಿತು.

ಮುಖಂಡರಾದ ಎಸ್. ಎನ್.ಸಿದ್ಧಾರ್ಥ, ಕೆ.ಮಹದೇವ, ಕರೋಹಟ್ಟಿ ಮಹದೇವಯ್ಯ, ಸೊಸಲೇ ಮಹದೇವಸ್ವಾಮಿ, ಎಂ.ಕೆ.ಸಿದ್ದರಾಜು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ನಿಂಗರಾಜು, ಡಣಾಯಕನಪುರ ಮಲ್ಲಣ್ಣ, ಕೋಮಲಾಕ್ಷಿ, ಗೌತಮ ಬುದ್ಧ ಟ್ರಸ್ಟ್ ಕಾರ್ಯದರ್ಶಿ ಬಿ.ಆರ್. ಪುಟ್ಟಸ್ವಾಮಿ, ಉಪಾಧ್ಯಕ್ಷ ಶಿವಣ್ಣ, ಖಜಾಂಚಿ ಮಹದೇವಯ್ಯ(ಸೀನಪ್ಪ), ಸ. ಕಾರ್ಯದರ್ಶಿ ಎನ್.ಲಿಂಗಪ್ಪಾಜಿ, ಟ್ರಸ್ಟಿಗಳಾದ ಪುಟ್ಟರಾಜು, ಮರಿಮಹದೇವಯ್ಯ, ಪ್ರಸನ್ನ, ಎನ್.ಮಹೇಶ, ಕನ್ನಹಳ್ಳಿ ಲಕ್ಷ್ಮಣ, ಶಿವಕುಮಾರ್, ಬಿ. ಮಹದೇವಸ್ವಾಮಿ, ಸೋಮೇಶ, ಪುಟ್ಟಮರುಡಯ್ಯ, ಅಂಕನಹಳ್ಳಿ ಪುಟ್ಟರಾಜು, ಆನಂದ್, ಲಿಂಗರಾಜು, ಎಸ್. ನಂಜುಂಡಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.