ಮೈಸೂರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸ್ಥಾಪಿತವಾದ ‘ಮೈಸೂರು ವಿಶ್ವವಿದ್ಯಾಲಯ’ದಲ್ಲಿ ಕಾಯಂ ಬೋಧಕರಿಗಿಂತ ಅತಿಥಿ ಉಪನ್ಯಾಸಕರ ಮೇಲಿನ ‘ಅವಲಂಬನೆ’ಯೇ ಜಾಸ್ತಿಯಾಗುತ್ತಿದೆ.

ಬೋಧಕ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಯು ಕಾಲಕಾಲಕ್ಕೆ ನಡೆಯದೇ ಇರುವುದು ಇದಕ್ಕೆ ಕಾರಣವಾಗಿದೆ.

ರಾಜ್ಯದಲ್ಲೇ ಮೊದಲನೆಯದು ಎಂಬ ಹೆಗ್ಗಳಿಕೆ ಜತೆಗೆ ಶತಮಾನದ ಇತಿಹಾಸವನ್ನೂ ಹೊಂದಿರುವ ಈ ವಿಶ್ವವಿದ್ಯಾಲಯದಲ್ಲಿ ನಿವೃತ್ತಿ ಅಥವಾ ವಿವಿಧ ಕಾರಣದಿಂದ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸವೂ ನಡೆಯುತ್ತಿಲ್ಲ.

ಇಲ್ಲಿಗೆ 664 ಬೋಧಕರ ಕಾಯಂ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 238 ಮಂದಿ ಮಾತ್ರ ಇದ್ದಾರೆ. ಬರೋಬ್ಬರಿ 426 ಹುದ್ದೆಗಳು ಖಾಲಿ ಇವೆ. ಇದನ್ನು ಸರಿದೂಗಿಸಲು ತುಸು ಹೆಚ್ಚಿನ ಪ್ರಮಾಣದಲ್ಲೇ ಅಂದರೆ ಸ್ನಾತಕ ವಿಭಾಗದಲ್ಲಿ 375 ಹಾಗೂ ಸ್ನಾತಕೋತ್ತರದಲ್ಲಿ 425 ಸೇರಿದಂತೆ ಒಟ್ಟು 800 ಮಂದಿ ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತಿದೆ.

ಇದೇ ವರ್ಷದ ಏಪ್ರಿಲ್–ಮೇ ವೇಳೆಗೆ ಇನ್ನಷ್ಟು ಮಂದಿ ಅನುಭವಿಗಳು ನಿವೃತ್ತರಾಗಲಿದ್ದು, ಆಗ ಖಾಲಿ ಹುದ್ದೆಗಳ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಲಿದೆ! ಇದು ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ದಶಕದಿಂದಲೂ ಕಾಯಂ ಸಿಬ್ಬಂದಿ ನೇಮಕಾತಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಈ ಕಾರಣದಿಂದ ಅತಿಥಿ ಉಪನ್ಯಾಸಕರ ಮೇಲೆ ‘ಅವಲಂಬನೆ’ ಜಾಸ್ತಿಯಾಗಿದೆ. ಮುಂದಿನ ವರ್ಷಗಳಲ್ಲಿ ಎಲ್ಲಾ ವಿಭಾಗಗಳಲ್ಲೂ ಕಾಯಂ ಬೋಧಕರಿಗಿಂತ ಅತಿಥಿ ಉಪನ್ಯಾಸಕರೇ ಹೆಚ್ಚಿರುವ ಸನ್ನಿವೇಶ ನಿರ್ಮಾಣವಾಗುವ ಸಾಧ್ಯತೆ ಇದೆ. ಇದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆಯ ಮೇಲೆ ‘ಪರಿಣಾಮ’ ಬೀರುವ ಆತಂಕ ಶೈಕ್ಷಣಿಕ ವಲಯದವರದ್ದಾಗಿದೆ.

‘ನಮ್ಮ ವಿಶ್ವವಿದ್ಯಾಲಯದಲ್ಲಿ ಮಂಜೂರಾದ ಕಾಯಂ ಬೋಧಕರ ಹುದ್ದೆಗಳಿಗಿಂತಲೂ ಖಾಲಿ ಇರುವ ಹುದ್ದೆಗಳ ಪ್ರಮಾಣವೇ ಜಾಸ್ತಿ ಇರುವುದು ನಿಜ. ಸರಾಸರಿ ಶೇ 70ಕ್ಕೂ ಜಾಸ್ತಿ ಖಾಲಿ ಇವೆ. ಭರ್ತಿ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅದೀಗ, ಆರ್ಥಿಕ ಇಲಾಖೆಯ ಹಂತದಲ್ಲಿದೆ. ತುರ್ತಾಗಿ ಮೊದಲನೇ ಹಂತದಲ್ಲಿ 70 ಬ್ಯಾಕ್ಲಾಗ್ ಹುದ್ದೆಗಳನ್ನಾದರೂ ತುಂಬುವಂತೆ ಕೋರಲಾಗಿದೆ’ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ಮುಚ್ಚದಂತೆ ನೋಡಿಕೊಳ್ಳಲಾಗಿದೆ: ‘ನೆರೆಯ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ವಿ.ವಿಯು ಆರಂಭವಾಗಿರುವುದರಿಂದಾಗಿ ಪ್ರಸ್ತುತ ನಮ್ಮ ವಿ.ವಿಯು ಮೈಸೂರಿಗೆ ಮಾತ್ರವೇ ಸೀಮಿತವಾಗಿದೆ. ಆದರೂ ಇಲ್ಲಿಗೆ ವ್ಯಾಸಂಗಕ್ಕೆ ವಿದ್ಯಾರ್ಥಿಗಳು ಬರುವುದು ಸಂಪೂರ್ಣ ನಿಂತು ಹೋಗುತ್ತದೆ ಎನ್ನಲಾಗದು. ಆದರೆ, ಇನ್ನೆರಡು ವರ್ಷ ನೆರೆಯ ಜಿಲ್ಲೆಗಳ ವಿದ್ಯಾರ್ಥಿಗಳು ನಮ್ಮ ಘಟಿಕೋತ್ಸವದಲ್ಲೇ ಪದವಿ ಪಡೆದುಕೊಳ್ಳಲಿದ್ದಾರೆ. ಸದ್ಯಕ್ಕೆ ಯಾವ ವಿಭಾಗವೂ ಮುಚ್ಚದಂತೆ ನೋಡಿಕೊಳ್ಳಲಾಗಿದೆ’ ಎನ್ನುತ್ತಾರೆ ಅವರು.

‘ವಿ.ವಿಯಲ್ಲಿ ಸಂಶೋಧನೆಗಳ ಪ್ರಮಾಣ ಹೆಚ್ಚಾಗಬೇಕಾದರೆ ಕಾಯಂ ಬೋಧಕ ವರ್ಗದ ಬಲದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಹಕರಿಸಿದರೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ತರಗತಿಗಳನ್ನು ಅತಿಥಿ ಉಪನ್ಯಾಸಕರ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಕಾಯಂ ಬೋಧಕರ ಹುದ್ದೆ ಭರ್ತಿ ಮಾಡಿಕೊಡುವ ಮೂಲಕ ಉನ್ನತ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಪ್ರೋತ್ಸಾಹ ಕೊಡಬೇಕು
ಪ್ರೊ.ಎನ್.ಕೆ. ಲೋಕನಾಥ್ ಕುಲಪತಿ ಮೈಸೂರು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.