ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ಉತ್ಸವ: ಪ್ರಜಾಪ್ರಭುತ್ವದ ಆಶಯ ಬಿಂಬಿಸಲು ‘ಯೋಗ ಪುಷ್ಪ’

ಸಾವಿರಾರು ಯೋಗಪಟುಗಳು ಭಾಗಿ; ‘ಯೋಗಗುಚ್ಛ’ ನೃತ್ಯ ರೂಪಕಕ್ಕೆ ತಯಾರಿ
Published : 24 ಸೆಪ್ಟೆಂಬರ್ 2024, 7:18 IST
Last Updated : 24 ಸೆಪ್ಟೆಂಬರ್ 2024, 7:18 IST
ಫಾಲೋ ಮಾಡಿ
Comments

ಮೈಸೂರು: ದಸರಾ ಉತ್ಸವಕ್ಕೆ ಈ ಬಾರಿ ವಿಶಿಷ್ಟ ಯೋಗ ಪ್ರದರ್ಶನ ಮೆರುಗು ನೀಡಲಿದೆ. ಅಂಬಾವಿಲಾಸ ಅರಮನೆ ಆವರಣದಲ್ಲಿ ಸಾವಿರಾರು ಯೋಗಪಟುಗಳಿಂದ ಮಾನವ ಸರಪಳಿ ರಚಿಸಿ ‘ಪ್ರಜಾಪ್ರಭುತ್ವಕ್ಕಾಗಿ ಯೋಗ’ ಆಚರಣೆಗೆ ಸಿದ್ಧತೆ ನಡೆದಿದೆ.

ಅ.4ರಿಂದ 12ರವರೆಗೆ ಕಾರ್ಯಕ್ರಮಕ್ಕೆ ಯೋಜಿಸಲಾಗಿದೆ. ಯೋಗ ಸ್ಪರ್ಧೆ, ಪ್ರಕೃತಿ ಸವಿಯಲು ಯೋಗ ಚಾರಣ, ಭಕ್ತಿ ಸೃಜಿಸಲು ಯೋಗದೊಂದಿಗೆ ದುರ್ಗಾ ನಮಸ್ಕಾರ, ಸಾಂಸ್ಕೃತಿಕವಾಗಿ ಜನರ ರಂಜಿಸಲು ‘ಯೋಗಗುಚ್ಛ’ ನೃತ್ಯ ಪ್ರದರ್ಶನಕ್ಕೂ ಯೋಗ ದಸರಾ ಉಪ ಸಮಿತಿ ತಯಾರಿ ನಡೆಸುತ್ತಿದೆ.

ಅ.7ರಂದು ಅರಮನೆ ಆವರಣದಲ್ಲಿ ನಡೆಯುವ ‘ಪ್ರಜಾಪ್ರಭುತ್ವಕ್ಕಾಗಿ ಯೋಗ’ದಲ್ಲಿ 5ಸಾವಿರ ಜನರು ಭಾಗವಹಿಸಲಿದ್ದಾರೆ. ಬೃಹತ್‌ ಮಾನವ ಸರಪಳಿಯ ಚಕ್ರಗಳನ್ನು ರಚಿಸಿ ಯೋಗ ಮಾಡಲಾಗುತ್ತದೆ. ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾರುವ ವಿವಿಧ ಭಿತ್ತಿ ಚಿತ್ರಗಳನ್ನು, ಫೋಷವಾಕ್ಯಗಳನ್ನು ಯೋಗಪಟುಗಳು ಪ್ರದರ್ಶಿಸಲಿದ್ದಾರೆ.

ದುರ್ಗಾ ನಮಸ್ಕಾರ: ‘ಅ.9ರಂದು ಚಾಮುಂಡಿಬೆಟ್ಟದ ಪಾದದಿಂದ ಬೆಟ್ಟದ ಮೇಲ್ಭಾಗದವರೆಗೆ ಮೆಟ್ಟಿಲುಗಳ ಮೂಲಕ ಯೋಗ ಚಾರಣ ನಡೆಯಲಿದೆ. ನೂರಾರು ಯೋಗಪಟುಗಳು, ಯೋಗ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಬಳಿಕ, ಚಾಮುಂಡಿ ದೇವಸ್ಥಾನದ ಆವರಣದ‌ಲ್ಲಿ ಯೋಗದ ಸುಮಾರು 12 ಭಂಗಿಗಳ ಮೂಲಕ 8 ನಿಮಿಷಗಳ ಕಾಲ ದುರ್ಗಾ ನಮಸ್ಕಾರ ನಡೆಯಲಿದೆ’ ಎಂದು ಯೋಗ ದಸರಾ ಉಪ ಸಮಿತಿ ಕಾರ್ಯದರ್ಶಿ ಡಾ.ಪುಷ್ಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ಬನ್ನಿಮಂಟಪದಲ್ಲಿ ಯೋಗ ನೃತ್ಯ: ‘ಅ.12ರಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೂ ಮುನ್ನ ಯೋಗಗುಚ್ಛ ಹೆಸರಿನಲ್ಲಿ ಯೋಗ ನೃತ್ಯ ರೂಪಕ ಏರ್ಪಡಿಸಲಾಗಿದೆ. 250 ಯೋಗ ಪಟುಗಳು ಭಾಗವಹಿಸಲಿದ್ದಾರೆ.  8 ನಿಮಿಷಗಳ ವಿವಿಧ ಆಸನಗಳೊಂದಿಗೆ ನೃತ್ಯ ನೀಡಲಾಗುತ್ತದೆ. ಇದರ ಪೂರ್ವಭಾವಿ ಪ್ರದರ್ಶನವನ್ನು ಅ.7ರಂದು ಅರಮನೆ ಆವರಣದಲ್ಲಿ ನೀಡಲಾಗುವುದು’ ಎಂದು ವಿವರಿಸಿದರು.

ಡಾ.ಪುಷ್ಪಾ
ಡಾ.ಪುಷ್ಪಾ
ಯುವಜನರಲ್ಲಿ ಪ್ರಜಾಪ್ರಭುತ್ವ ಮೌಲ್ಯ ಬಿತ್ತಲು ಕ್ರಮ 250 ಯೋಗ ಪಟುಗಳಿಂದ ಸಾಮೂಹಿಕ ನೃತ್ಯ ಚಾಮುಂಡಿ ಬೆಟ್ಟಕ್ಕೆ ಯೋಗ ಚಾರಣ
ಯೋಗ ನೃತ್ಯದೊಂದಿಗೆ ಉದ್ಘಾಟನೆ ಅ.4ರಂದು 
ಯೋಗ ದಸರೆಯನ್ನು ಅ.4ರಂದು ಜೆ.ಕೆ.ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. 40 ವರ್ಷ ಮೇಲಿನ 6 ಯೋಗಪಟುಗಳಿಗೆ ಯೋಗ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗ್ರಾಮೀಣ ಯೋಗಪಟುಗಳಿಂದ ನೃತ್ಯರೂಪಕದ ಪ್ರದರ್ಶನವಿದೆ. ಯೋಗ ಸ್ಪರ್ಧೆ: ವಸ್ತುಪ್ರದರ್ಶನ ಪ್ರಾಧಿಕಾರ ಅವರಣದ ಕಾಳಿಂಗರಾವ್ ಸಭಾಂಗಣದಲ್ಲಿ ಅ.5ರಂದು ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ವಿವಿಧ ವಯೋಮಾನದಲ್ಲಿ 12 ವಿಭಾಗದಲ್ಲಿ ನಡೆಯಲಿದೆ. ಈಗಾಗಲೇ 700 ಮಂದಿ ನೋಂದಾಯಿಸಿದ್ದಾರೆ. ವೆಬ್‌ಸೈಟ್‌ ಲಿಂಕ್‌: https://forms.gle/eEAMrXDu4sGduCkx9 ಮೂಲಕ ಅ.2ರವರೆಗೂ ನೋಂದಾಯಿಸಬಹುದು.
‘₹25 ಲಕ್ಷ ಅನುದಾನಕ್ಕೆ ಪ್ರಸ್ತಾವ’
‘ಯೋಗ ದಸರೆಗೆ ಸಿದ್ಧತೆ ಕೈಗೊಳ್ಳಲಾಗಿದ್ದು ₹25 ಲಕ್ಷ ಅನುದಾನಕ್ಕಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಪುಷ್ಪಾ ತಿಳಿಸಿದರು. ‘ನಗರದಲ್ಲಿ ಹಲವು ಯೋಗ ಕೇಂದ್ರಗಳು ಮತ್ತು ಶಾಲಾ–ಕಾಲೇಜುಗಳು ಆಯೋಜನೆಗೆ ಸಹಕಾರ ನೀಡುತ್ತಿವೆ. ‘ಜನರಿಂದ ಜನರಿಗಾಗಿ ಜನರ ಯೋಗ’ ಎಂಬ ಘೋಷವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT