ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಹುಲಿ ದಾಳಿ ಹೆಚ್ಚಾಗಿದ್ದು ಭಾನುವಾರ ಪಟ್ಟಣಕ್ಕೆ ಹೊಂದಿಕೊಂಡಿರುವ ಕಟ್ಟೇಮನುಗನಹಳ್ಳಿ ಹಸು ಕರುವನ್ನು ಹಾಗೂ ತಾಲ್ಲೂಕಿನ ಅರಣ್ಯ ಪ್ರದೇಶ ಹತ್ತಿರದ ಜಕ್ಕಹಳ್ಳಿ ಬಳಿ ಎತ್ತು ಒಂದನ್ನು ಕೊಂದು ಹಾಕಿದೆ.

ಕಳೆದ ಒಂದು ವಾರದಲ್ಲಿ ಹುಲಿಗಳ ನಿರಂತರ ದಾಳಿಯಿಂದ ಈ ಎರಡು ಭಾಗದಲ್ಲಿ ಆರು ಜಾನುವಾರುಗಳು ಮೃತಪಟ್ಟಿವೆ.

ಕಟ್ಟೇಮನುಗನಹಳ್ಳಿ ರೈತ ಮಹದೇವಸ್ವಾಮಿಯವರ ಕರುವಿನ ಮೇಲೆ ಹುಲಿ ದಾಳಿಮಾಡಿ ಹೊತ್ತೊಯ್ಯುತ್ತಿದ್ದಾಗ ದಿಲೀಪ್ ಕುಮಾರ್ ಮತ್ತು ಇತರರು ಕೂಗಾಡಿದಾಗ ಕರುವನ್ನು ಬಿಟ್ಟು ಪೊದೆಯೊಳಗೆ ಹೋಗಿದೆ.

ಜಕ್ಕಹಳ್ಳಿಯ ರಾಜೇಗೌಡ ಜಮೀನಿನಲ್ಲಿ ಮೇಯಿಸುತ್ತಿದ್ದ ಎತ್ತಿನ ಮೇಲೆ ಹುಲಿ ಏಕಾಏಕಿ ದಾಳಿ ಮಾಡಿದ್ದು ಅಕ್ಕ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರು ಗಾಬರಿಗೊಂಡು ಕಿರುಚಿ ಕೊಂಡಾಗ ಹುಲಿ ಎತ್ತನ್ನು ಬಿಟ್ಟು ಕಾಡಿಗೆ ಓಡಿದೆ. ಜನರು ಬಂದು ನೋಡುವಷ್ಟರಲ್ಲಿ ಗಂಟಲನ್ನು ಹುಲಿ ಸೀಳಿದ್ದರಿಂದ ಅಸು ನೀಗಿತ್ತು.

ವಿವರ: ಹುಲಿಯು ಪಟ್ಟಣದ ಸಮೀಪದ ಗ್ರಾಮಗಳಾದ ಮೊತ್ತ, ಕಟ್ಟೇಮನಗನಹಳ್ಳಿ, ಕೃಷ್ಣಾಪುರ ಮತ್ತು ಅಲತ್ತಾಳಹುಂಡಿ ಬಳಿ ದಾಳಿ ನಡೆಸುತ್ತಿದೆ. ಇನ್ನೊಂದೆಡೆ ಜಕ್ಕಹಳ್ಳಿ, ಬ್ರಹ್ಮಗಿರಿ, ಗಂಡತ್ತೂರು ಭಾಗದಲ್ಲಿ ನಿರಂತರ ದಾಳಿಯಿಂದ ಸಾಕು ಪ್ರಾಣಿಗಳು ಬಲಿಯಾಗುತ್ತಿವೆ.

‘ಕಟ್ಟೆಮನುಗನಹಳ್ಳಿಯಲ್ಲಿ ಕಾಣಿಸಿಕೊಂಡಿರುವುದರಿಂದ ರೈತರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ರೈತರು ಜಾನುವಾರುಗಳಿಗೆ ನೀರು ಕುಡಿಸಲು ತಾರಕ ನೆಲೆಗೆ ಹೋಗಿ ಬರಲು ತೀವ್ರ ಭಯಪಡುವ ವಾತಾವರಣ ನಿರ್ಮಾಣವಾಗಿದೆ’ ಎಂದು ಆಲತ್ತಾಳಹುಂಡಿಯ ಗ್ರಾಮ ಪಂಚಾಯಿತಿ ಸದಸ್ಯ ಕೆಂಡಗಣ್ಣಸ್ವಾಮಿ ಹೇಳುತ್ತಾರೆ.

‘ನಿರಂತರ ಕಾಡು ಪ್ರಾಣಿಗಳ ಹಾವಳಿ, ರೈತರ ಜಾನುವಾರುಗಳ ಬಲಿಯಿಂದ ರೈತರು ಆತಂಕಗೊಂಡಿದ್ದಾರೆ’ ಎಂದು ರೈತ ಬಸಪ್ಪ ಆರೋಪಿಸಿದ್ದಾರೆ.

‘ಹುಲಿ ಎತ್ತು, ಕರುಗಳ ಕುತ್ತಿಗೆಗೆ ಮೇಲೆ ದಾಳಿ ಮಾಡಿದಾಗ ಜಾನುವಾರುಗಳ ರಕ್ತ ಸೋರಿಸುತ್ತಾ ನಡೆದುಕೊಂಡು ಹೋಗುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಆ ಜಾನುವಾರು ತೀವ್ರ ಗಾಯವಾಗಿರುವುದರಿಂದ ಬದುಕುಳಿಯುವುದು ಅಸಾಧ್ಯ’ ಎಂದು ರೈತ ರಾಜೇಗೌಡ ಹೇಳುತ್ತಾರೆ.

‘ಮೊತ್ತ, ಕಟ್ಟೇಮನಗನಹಳ್ಳಿ, ಕೃಷ್ಣಾಪುರ ಮತ್ತು ಅಲತ್ತಾಳಹುಂಡಿ ಗ್ರಾಮಗಳು ಪಟ್ಟಣದ ಸಮೀಪವೇ ಇದ್ದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿಯನ್ನು ಸೆರೆಹಿಡಿದಿಲ್ಲ’ ಎಂದು ಗ್ರಾಮದ ಮುಖಂಡ ಲೋಕೇಶ್ ಆರೋಪಿಸಿದ್ದಾರೆ.

ಹುಲಿ ಚಲನವಲನ ನಿಗಾಕ್ಕೆ ಕ್ಯಾಮೆರಾ ಅಳವಡಿಕೆ ಸೆರೆಗೆ ಬೋನು

ಸಾಮಾಜಿಕ ವಲಯ ಅರಣ್ಯಾಧಿಕಾರಿ ಪೂಜಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ ‘ಚಳಿಗಾಲದ ಸಂದರ್ಭದಲ್ಲಿ ಸಾಮಾನ್ಯವಾಗಿ ಹುಲಿಗಳು ಕಾಡಿನಿಂದ ಹೊರಬರುತ್ತವೆ. ಕಾಡಿನಿಂದ ಹೊರಬಂದು ಜಾನುವಾರುಗಳ ಬೇಟೆಯಾಡುತ್ತಿವೆ. ಬೇಟೆಯಾಡಿದ ಪ್ರಾಣಿಗಳನ್ನು ಹುಲಿಗೆ ತಿನ್ನಲು ಬಿಟ್ಟರೆ ಅವು ಇಲ್ಲಿಯೇ ತಂಗಿ ಬಿಡುತ್ತವೆ. ಇಲ್ಲಿ ಅನಾನುಕೂಲ ವಾತಾವರಣ ನಿರ್ಮಿಸಿ ಕಾರ್ಯಾಚರಣೆ ನಡೆಸಿ ಕಾಡಿಗೆ ಓಡಿಸುವ ಕೆಲಸ ಮಾಡಬೇಕಾಗಿದೆ’ ಎಂದರು. ‘ಹುಲಿಯ ಚಲನವಲನ ಇರುವ ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ ಕ್ಯಾಮೆರಾ ಹುಲಿ ಓಡಾಟ ಸೆರೆಯಾಗಿಲ್ಲ. ಸಾರ್ವಜನಿಕರು ರಾತ್ರಿಯ ವೇಳೆಯಲ್ಲಿ ಒಂಟಿಯಾಗಿ ಓಡಾಡಬಾರದು ಹುಲಿಗಳು ಯಾವಾಗಲೂ ಪೊದೆಯ ನಡುವೆ ಓಡಾಟ ನಡೆಸುತ್ತವೆ. ಅವುಗಳ ಜಾಡು ಹಿಡಿಯುವುದು ಅಷ್ಟು ಸುಲಭವಲ್ಲ ಈಗಾಗಲೇ ಕಟ್ಟೆಮನುಗನಹಳ್ಳಿ ಗ್ರಾಮದಲ್ಲೂ ಸಹ ಮತ್ತೊಂದು ಬೋನು ಇಡಲಾಗಿದೆ. ಅರಣ್ಯ ಇಲಾಖೆಯ ವತಿಯಿಂದ ಸೋಮವಾರವೂ ಸಹ ಕೂಬಿಂಗ್ ಕಾರ್ಯಾಚರಣೆಯನ್ನು ಸಹ ನಡೆಸುತ್ತೇವೆ’ ಎಂದು ಹೇಳಿದರು.

ಎಚ್.ಡಿ.ಕೋಟೆ: ತಾಲ್ಲೂಕಿನ ಕಟ್ಟೇಮನುಗನಹಳ್ಳಿ ಗ್ರಾಮದ ಸಮೀಪದ ತಾರಕಾ ನದಿಯ ಬಳಿ ಹುಲಿ ದಾಳಿ ನಡೆಸಿ ಕರುವನ್ನು ಎಳೆದೊಯ್ಯುತ್ತಿದ್ದ ಸಂದರ್ಭದಲ್ಲಿ ಜನರ ಚೀರಾಟದಿಂದ ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಯಿತು. ತಾಲ್ಲೂಕಿನ ಕಟ್ಟೇಮನುಗನಹಳ್ಳಿ ರೈತ ಮಹದೇವಸ್ವಾಮಿಯವರ ಕರುವನ್ನು ದಾಳಿ ಮಾಡಿ ಎಳೆದೊಯ್ಯಲು ಯತ್ನಿಸಿದ ಹುಲಿಯನ್ನು ಗಮನಿಸಿದ ದಿಲೀಪ್ ಕುಮಾರ್ ಮತ್ತು ಇತರರ ಚೀರಾಟಕ್ಕೆ ಪೊದೆಗಳಗೆ ಹುಲಿಯು ನುಸುಳಿದ ಘಟನೆ ನಡೆದಿದೆ.

ನಿರಂತರ ಕಾಡು ಪ್ರಾಣಿಗಳ ಹಾವಳಿ ರೈತರ ಜಾನುವಾಳಗಳ ಬಲಿಯಿಂದ ರೈತರು ಆತಂಕಗೊಂಡಿದ್ದಾರೆ ಎಂದು ರೈತ ಬಸಪ್ಪ ಆರೋಪಿಸಿದ್ದಾರೆ. ಕಳೆದ ಒಂದು ವಾರದಿಂದ ಹುಲಿ ದಾಳಿಗೆ ನಿರಂತರವಾಗಿ ಮೊತ್ತ ಗ್ರಾಮದಲ್ಲಿ ಜಾನುವಾರುಗಳು ಬಲಿಯಾಗಿದ್ದ ಹಿನ್ನೆಲೆಯಲ್ಲಿ ಮೊತ್ತಾಗ್ರಾಮದ ಬಸವರಾಜಪ್ಪ ನವರ ಜಮೀನಿನಲ್ಲಿ ಹುಲಿ ಸೆರೆಹಿಡಿಯಲು ಬೋನನ್ನು ಇರಿಸಲಾಗಿದೆ.

ಕಟ್ಟೆಮನುಗನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿರುವುದರಿಂದ ರೈತರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ ರೈತರು ಜಾನುವಾರುಗಳಿಗೆ ನೀರು ಕುಡಿಸಲು ತಾರಕ ನೆಲೆಗೆ ಹೋಗಿ ಬರಲು ತೀವ್ರ ಭಯಪಡುವ ವಾತಾವರಣ ನಿರ್ಮಾಣವಾಗಿದೆ ಎಂದು ಆಲತ್ತಾಳಹುಂಡಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಕೆಂಡಗಣ್ಣಸ್ವಾಮಿ ಹೇಳುತ್ತಾರೆ. ಕಳೆದ ಒಂದು ವಾರದಿಂದ ಐದಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ಪಡೆದಿರುವ ಹುಲಿಯು ಪಟ್ಟಣದ ಸಮೀಪದ ಗ್ರಾಮಗಳಾದ ಮೊತ್ತ ಕಟ್ಟೇಮನಗನಹಳ್ಳಿ ಕೃಷ್ಣಾಪುರ ಮತ್ತು ಅಲತ್ತಾಳಹುಂಡಿ ಸಮೀಪವೇ ಇದ್ದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿಯನ್ನ ಸೆರೆಹಿಡಿದಿಲ್ಲ ಎಂದು ಗ್ರಾಮದ ಮುಖಂಡ ಲೋಕೇಶ್ ಆರೋಪಿಸಿದ್ದಾರೆ.

ಸಾಮಾಜಿಕ ವಲಯ ಅರಣ್ಯಾಧಿಕಾರಿ ಪೂಜಾ ಪತ್ರಿಕೆಯೊಂದಿಗೆ ಮಾತನಾಡಿ ಚಳಿಗಾಲದ ಸಂದರ್ಭದಲ್ಲಿ ಸಾಮಾನ್ಯವಾಗಿ ಹುಲಿಗಳು ಕಾಡಿನಿಂದ ಹೊರಬರುತ್ತವೆ. ಕಾಡಿನಿಂದ ಹೊರಬಂದು ಜಾನುವಾರುಗಳ ಬೇಟೆಗೆ ಪ್ರಯತ್ನಿಸುತ್ತವೆ. ಬೇಟೆಯಾಡಿದ ಪ್ರಾಣಿಗಳನ್ನು ಹುಲಿಗೆ ತಿನ್ನಲು ಬಿಟ್ಟರೆ ಅವು ಇಲ್ಲಿಯೇ ತಂಗಿ ಬಿಡುತ್ತವೆ ಇಲ್ಲಿ ಅನಾನುಕೂಲ ವಾತಾವರಣ ನಿರ್ಮಿಸಿ ಕಾರ್ಯಾಚರಣೆ ನಡೆಸಿ ಕಾಡಿಗೆ ಓಡಿಸುವ ಕೆಲಸ ಮಾಡಬೇಕಾಗಿದೆ ಎಂದರು. ಹುಲಿಯ ಚಲನವಲನ ಇರುವ ಕಡೆಗಳಲ್ಲಿ ಕ್ಯಾಮರಗಳನ್ನ ಅಳವಡಿಸಲಾಗಿದೆ ಯಾವುದೇ ಕ್ಯಾಮೆರಾ ಬಿದ್ದಿಲ್ಲ. ಸಾರ್ವಜನಿಕರು ರಾತ್ರಿಯ ವೇಳೆಯಲ್ಲಿ ಒಂಟಿಯಾಗಿ ಓಡಾಡಬಾರದು ಸಾರ್ವಜನಿಕರ ಸಹಕಾರ ಮುಖ್ಯ. ಹುಲಿಗಳು ಯಾವಾಗಲೂ ಪೊದೆಯ ನಡುವೆ ಓಡಾಟ ನಡೆಸುತ್ತವೆ. ಅವುಗಳ ಜಾಡು ಹಿಡಿಯುವುದು ಅಷ್ಟು ಸುಲಭವಾಗಿರುವುದಿಲ್ಲ ಈಗಾಗಲೇ ಕಟ್ಟೆಮನುಗನಹಳ್ಳಿ ಗ್ರಾಮದಲ್ಲೂ ಸಹ ಮತ್ತೊಂದು ಬೋನು ಇಡಲಾಗಿದೆ. ಅರಣ್ಯ ಇಲಾಖೆಯ ವತಿಯಿಂದ ನಾಳೆಯೂ ಸಹ ಕೂಬಿಂಗ್ ಕಾರ್ಯಾಚರಣೆಯನ್ನು ಸಹ ನಡೆಸುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.