ವರ್ಷದ ಹಿಂದೆ ಆರಂಭವಾಗಿರುವ ಕೋಶ ₹ 2.7 ಕೋಟಿ ವೆಚ್ಚದ ಪ್ರಯೋಗಾಲಯ ತರಬೇತಿ ಹಂತದಲ್ಲಿಯೇ ಇರುವ ಸಿಬ್ಬಂದಿ
‘ಆಮೆಗತಿಯಲ್ಲಿಯೇ ಇದೆ’
‘ರಾಜ್ಯದಲ್ಲಿ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವ ಕಾರಣ ವಿಧಿವಿಜ್ಞಾನ ಪ್ರಯೋಗಾಲಯದ ಮಾಹಿತಿ ನಿರ್ಣಾಯಕ. ಪ್ರಯೋಗಾಲಯ ಸ್ಥಾಪನೆ ದಶಕದಿಂದ ಆಮೆಗತಿಯಲ್ಲಿದೆ’ ಎಂದು ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ದಾಳಿಕೋರ ಹುಲಿ ಮತ್ತು ಸೆರೆ ಸಿಕ್ಕ ಹುಲಿ ಬೇರೆಯಾಗಿರಬಹುದು. ತೊಂದರೆ ಮಾಡದ ಪ್ರಾಣಿಗಳ ಸೆರೆ ತಪ್ಪಿಸಲು ಪ್ರಯೋಗಾಲಯದ ಸ್ಥಾಪನೆ ಅತ್ಯಗತ್ಯ’ ಎಂದರು.