ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜಯಪುರದ ಚಿಕ್ಕನಹಳ್ಳಿ ಬಳಿಯ ಅರಸಿನಕೆರೆ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ

ಗ್ರಾಮಸ್ಥರಲ್ಲಿ ಆತಂಕ: ವ್ಯಾಘ್ರ ಸೆರೆಗೆ ಒತ್ತಾಯ
Published 5 ಆಗಸ್ಟ್ 2023, 15:29 IST
Last Updated 5 ಆಗಸ್ಟ್ 2023, 15:29 IST
ಅಕ್ಷರ ಗಾತ್ರ

ಜಯಪುರ: ಸಮೀಪದ ಚಿಕ್ಕನಹಳ್ಳಿ ಅರಣ್ಯ ಪ್ರದೇಶದ ಅರಸಿನಕೆರೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಶುಕ್ರವಾರ ಸಂಜೆ ಹುಲಿಯೊಂದು ಕಾಣಿಸಿಕೊಂಡಿದ್ದು, ಹಸುವಿನ ಮೇಲೆ ದಾಳಿ ಮಾಡಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

‘ಹಸುವಿನ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಆಟೋ ಹಾರನ್‌ ಶಬ್ದಕ್ಕೆ ಹಸುವನ್ನು ಬಿಟ್ಟು ಪೊದೆಯೊಳಗೆ ಹೋಯಿತು’ ಎಂದು ಪ್ರತ್ಯಕ್ಷದರ್ಶಿ ಗೋಪಾಲಪುರ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಯಪುರ, ಅರಸಿನಕೆರೆ, ಮಹದೇವಪುರ, ಹಾರೋಹಳ್ಳಿ, ಗುಜ್ಜೇಗೌಡನಪುರ, ಮಾವಿನಹಳ್ಳಿ, ಬೆಟ್ಟದಬೀಡು, ಗುಮಚನಹಳ್ಳಿ, ಸೋಲಿಗರ ಕಾಲೊನಿ, ಗೋಪಾಲಪುರ ಭಾಗದಲ್ಲಿ ವ್ಯಾಘ್ರ ಕಾಣಿಸಿಕೊಂಡಿದೆ.

‘ಹುಲಿ ಜೊತೆಗಿರುವ ಎರಡು ಮರಿಗಳ ಸೆರೆಗಾಗಿ ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಕ್ಯಾಮೆರಾ ಅಳವಡಿಸಿ, ಬೋನು ಇರಿಸಿರುವುದು ಬಿಟ್ಟರೆ, ಹುಲಿ ಸೆರೆಗಾಗಿ ಅರಣ್ಯ ಅಧಿಕಾರಿಗಳು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಜಮೀನುಗಳಿಗೆ ತೆರಳಲು ರೈತರು ಭಯ ಪಡುವಂತಾಗಿದೆ’ ಎಂದು ಅರಸಿನಕೆರೆ ಗ್ರಾಮದ ಆನಂದ್ ದೂರಿದರು.

‘ಜಯಪುರ ಸಮೀಪದ ಚಿಕ್ಕನಹಳ್ಳಿ ಹಾಗೂ ಅರಬ್ಬಿತಿಟ್ಟು ಅರಣ್ಯ ಪ್ರದೇಶಕ್ಕೆ ಹುಲಿಗಳು ಆಗಾಗ್ಗೆ ಬಂದು ಹೋಗುವುದು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಕಂಡುಬಂದಿದೆ. ಸಮೀಪದ ಮಂಡನಹಳ್ಳಿಯಲ್ಲಿ ಹುಲಿ ಸೆರೆಗಾಗಿ ಬೋನು ಇರಿಸಲಾಗಿದೆ. ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾರೆ, ಪ್ರತಿದಿನವೂ ಹುಲಿ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಸೆರೆ ಹಿಡಿಯಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಸುರೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT