ಮೈಸೂರು: ಸಂಸ್ಕೃತಿ ವುಮನ್ ಸ್ಪಿಯರ್ ಸ್ವಯಂ ಸೇವಾ ಸಂಸ್ಥೆಯು ‘ವನಮಿತ್ರ’ ಯೋಜನೆ ಮೂಲಕ ನಾಗರಹೊಳೆ ಅರಣ್ಯ ಪ್ರದೇಶದ ದೂರದ ಅಳಮಲು ಭಾಗದಲ್ಲಿ ವಾಸಿಸುವ 50 ಆದಿವಾಸಿ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸಿದೆ.

ಯೋಜನೆ ಭಾಗವಾಗಿ ಆದಿವಾಸಿ ಸಮುದಾಯದ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಬ್ಲಾಂಕೆಟ್, ಚಾಪೆ, ಉಕ್ಕಿನ ತಟ್ಟೆ, ಸೀರೆ, ಟೀ-ಶರ್ಟ್, ನೈಟಿ, ಬಳೆ, ಸ್ಯಾನಿಟರಿ ಪ್ಯಾಡ್, ಹಣ್ಣು ಮತ್ತು ತಿನಿಸುಗಳನ್ನು ವಿತರಿಸಲಾಯಿತು.

ಸಂಸ್ಥೆಯ ಸದಸ್ಯರು ಆದಿವಾಸಿಗಳೊಂದಿಗೆ ಸಂವಾದ ನಡೆಸಿದರು. ಬಳಿಕ ಸಮೀಪದ ಆದಿವಾಸಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಊಟ ವಿತರಿಸಿದರು.

ಸಂಸ್ಥೆಯ ಅಧ್ಯಕ್ಷೆ ಶ್ರೀದೇವಿ ಭೂಪಾಲಂ ಮಾತನಾಡಿ, ‘ವನಮಿತ್ರ ಯೋಜನೆಯೊಂದಿಗೆ ಮೂಲಸೌಕರ್ಯ ಒದಗಿಸುವ ಉದ್ದೇಶ ಹೊಂದಿದ್ದು, ಸಮಾಜ ಮತ್ತು ಅರಣ್ಯವಾಸಿ ಸಮುದಾಯಗಳ ನಡುವೆ ಸಂಪರ್ಕ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.

ಕಾರ್ಯದರ್ಶಿ ಕೀರ್ತಿ ರಮೇಶ್, ಖಜಾಂಚಿ ನಂದ ಲೋಕೇಶ್, ಉಪಾಧ್ಯಕ್ಷೆ ಅರ್ಚನಾ ಬಸವರಾಜ್, ಸಾಂಸ್ಕೃತಿಕ ನಿರ್ದೇಶಕಿ ಶಿಲ್ಪಾ ಸಂದೀಪ್, ಸೇವಾ ನಿರ್ದೇಶಕಿ ರಶ್ಮಿ ನಾಗೇಂದ್ರ, ಯೋಜನಾ ಸಂಯೋಜಕಿ ಸಪ್ನಾ ಮಧುಸೂದನ್, ನಿರ್ದೇಶಕರಾದ ಆಶಾ ರಮೇಶ್, ರೇಖಾ, ಯುವ ನಿರ್ದೇಶಕರಾದ ವೈಷ್ಣವಿ ವಿಷ್ಣು, ಅಮೂಲ್ಯ ದರ್ಶನ್, ಮಧು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.