ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸಿಂಹ' ಸೈಡ್ ಸರಿಸಿ BJP ಟಿಕೆಟ್ ಗಿಟ್ಟಿಸಿದ ಸ್ಟೈಲಿಶ್ ಯದುವೀರ್‌ ಹಿನ್ನೆಲೆ ಏನು?

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ, ‘ಸ್ಟೈಲಿಶ್’ ಯದುವೀರ್‌..
Published 13 ಮಾರ್ಚ್ 2024, 16:12 IST
Last Updated 13 ಮಾರ್ಚ್ 2024, 16:21 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಸಕ್ರಿಯವಾಗಿದ್ದಾರೆ. ‘ಫೇಸ್‌ಬುಕ್‌’, ‘ಎಕ್ಸ್‌’ನಲ್ಲಿ ಅಪಾರ ‘ಫಾಲೋವರ್‌’ಗಳನ್ನು ಹೊಂದಿದ್ದಾರೆ.

ಫೇಸ್‌ಬುಕ್‌ ಖಾತೆಯಲ್ಲಿ ತಮ್ಮ ಅಭಿಪ್ರಾಯ, ಪಾಲ್ಗೊಳ್ಳುವ ಕಾರ್ಯಕ್ರಮಗಳ ಫೋಟೊಗಳು, ಅರಮನೆಯಲ್ಲಿನ ವಿಶೇಷಗಳು, ಚಟುವಟಿಕೆಗಳು ಮೊದಲಾದವುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಹೊಸ ಟ್ರೆಂಡಿಂಗ್ ಹಾಗೂ ಸ್ಟೈಲ್ ಅಳವಡಿಕೆಯಲ್ಲಿ ಸದಾ ಮುಂದು. ಬ್ರಾಂಡೆಂಡ್ ಬಟ್ಟೆಗಳು, ದುಬಾರಿ ಕನ್ನಡಕ, ವಾಚ್‌ಗಳನ್ನು ಬಳಸುತ್ತಾರೆ. ರಾಜವಂಶದವರು ಧರಿಸುವ ಕಿವಿಓಲೆಯನ್ನು ಹಾಕುವುದು ವಿಶೇಷ. ದಸರಾ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ, ಗಂಭೀರವದನರಾಗಿ ರತ್ನಖಚಿತ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಸುತ್ತಾರೆ. ರೇಸ್ ಹಾಗೂ ಗಾಲ್ಫ್‌ನಲ್ಲೂ ಅವರಿಗೆ ತೀವ್ರ ಆಸಕ್ತಿ ಹೊಂದಿದ್ದಾರೆ. ಟರ್ಫ್ ಕ್ಲಬ್‌ಗಳಿಂದ ಆಯೋಜಿಸಲಾಗುವ ಡರ್ಬಿ ವೀಕ್ಷಿಸಲು ಸ್ಟೈಲಿಶ್ ಆಗಿ ಪಾಲ್ಗೊಳ್ಳುತ್ತಾರೆ. ಅವರನ್ನು ಇದೀಗ, ಬಿಜೆಪಿ ಟಿಕೆಟ್‌ ಹುಡುಕಿಕೊಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT