ಸೋಮವಾರ, ಜನವರಿ 27, 2020
22 °C

ಬೆದರಿಕೆ ಕರೆಗಳಿಗೆ ಬಗ್ಗೋದಿಲ್ಲ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ‘ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರವಾಗಿ ಮಾತನಾಡಿದ್ದಕ್ಕೆ ನನಗೆ ಜೀವ ಬೆದರಿಕೆ ಕರೆ ಬಂದಿತ್ತು. ಆದರೆ, ನಾನು ಇಂತಹ ಹೇಡಿತನದ ಬೆದರಿಕೆ ಕರೆಗಳಿಗೆ ಬಗ್ಗೋದಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎರಡು ದಿನದ ಹಿಂದೆ ಹಾಗೂ ಶನಿವಾರ ರಾತ್ರಿ ಅನಾಮಿಕ ಕರೆ ಬಂದಿರುವುದು ನಿಜ. ‘ಸಿಎಎ ಬಗ್ಗೆ ನೀವು ಸಿಕ್ಕಾಪಟ್ಟೆ ಮಾತನಾಡುತ್ತಿದ್ದೀರಿ. 48 ಗಂಟೆಯೊಳಗಾಗಿ ನೀವು ಮಾತನಾಡುವುದನ್ನು ನಿಲ್ಲಿಸದಿದ್ದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಬೆದರಿಕೆ ಬಂದಿದೆ ಎಂದು ತಿಳಿಸಿದರು.

‘ಕೇವಲ ಬೆದರಿಕೆ ಕರೆಗಳು ಮಾತ್ರವಲ್ಲ, ನಾವು ಮಾಡುತ್ತಿರುವ ಕೆಲಸಗಳನ್ನು ಮೆಚ್ಚಿ ಮುಸ್ಲಿಂ ಹೆಣ್ಣು ಮಕ್ಕಳು ಕೂಡ ಕರೆ ಮಾಡಿ ನಮಗೆ ಹರಸುತ್ತಿದ್ದಾರೆ’ ಎಂದರು.

‘ತ್ರಿವಳಿ ತಲಾಖ್ ಕಾಯ್ದೆ ಜಾರಿ ಸಂದರ್ಭದಲ್ಲೂ ನನಗೆ ಒಂದು ಬೆದರಿಕೆ ಕರೆ ಬಂದಿತ್ತು. ಆಗ ಕರೆ ಮಾಡಿದವನಿಗೆ ನಾನು ವಾಪಸ್ ಉತ್ತರ ಕೊಡುವ ಮೊದಲೇ ಮೊಬೈಲ್ ಆಫ್ ಆಗಿತ್ತು. ಇದೀಗ ಸಿಎಎ ವಿಚಾರವಾಗಿ ಮಾತನಾಡಿದ್ದಕ್ಕೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು