ಸೋಮವಾರ, ಫೆಬ್ರವರಿ 24, 2020
19 °C

ಎಫ್‌ಪಿಎಐ ಕಟ್ಟಡ ಧ್ವಂಸ: ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಗುಂಡಪ್ಪ ಶೆಡ್‌ನಲ್ಲಿರುವ ಭಾರತೀಯ ಕುಟುಂಬ ಯೋಜನಾ ಸಂಘದ (ಎಫ್‌ಪಿಎಐ) ಆಸ್ಪತ್ರೆಯ ಕಟ್ಟಡದ ಕೆಲವು ಭಾಗಗಳನ್ನು ದಿಢೀರ್ ಕೆಡವಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಎಸ್‌.ಬಿ.ಅಶೋಕ್‌ಕುಮಾರ್ ಒತ್ತಾಯಿಸಿದರು.

ಆಸ್ಪತ್ರೆಯ ಶೌಚಾಲಯ, ಸ್ನಾನಗೃಹ, ಕಾಂಪೌಂಡ್‌, ಕಾರ್‌ಶೆಡ್ ಕೆಡವಿದ್ದಾರೆ. ಬಡವರಿಗಾಗಿಯೇ ಇರುವ ಸೇವಾಮನೋಭಾವದ ಆಸ್ಪತ್ರೆಯನ್ನು ಸ್ಮಾರ್ಟ್‌ಸಿಟಿ ಅಧಿಕಾರಿಗಳು ನೋಟಿಸ್‌ ನೀಡದೇ, ಸಂಘದ ಗಮನಕ್ಕೆ ತಾರದೇ ಧ್ವಂಸ ಮಾಡಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರದಿರು.

47 ವರ್ಷಗಳಿಂದ ತಾಯಿ-ಮಗುವಿನ ಆರೋಗ್ಯ, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಯ ಸೇವೆ ನೀಡುತ್ತಾ ಬಂದಿದೆ. ಗರ್ಭಿಣಿ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿದೆ. 1974ರಲ್ಲಿ ಆರಂಭವಾದ ಆಸ್ಪತ್ರೆಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಗುಂಡಪ್ಪಶೆಡ್‌ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಿತ್ತು. 2002ರಲ್ಲೇ ಸ್ವಂತ ಕಟ್ಟಡ ನಿರ್ಮಿಸಲಾಗಿತ್ತು ಎಂದು ವಿವರ ನೀಡಿದರು.

ಕಟ್ಡದ ಸುತ್ತ ಇರುವ ಹೆಚ್ಚುವರಿ ಜಾಗ ಆಸ್ಪತ್ರೆಗೇ ನೀಡುವಂತೆ ಮನವಿ ಮಾಡಿದ್ದೆವು. ಆಸ್ಪತ್ರೆಯ ಸೇವಾ ಮನೋಭಾವ ಗುರುತಿಸಿದ ಪಾಲಿಕೆಯ ಹಿಂದಿನ ಆಯುಕ್ತೆ ಚಾರುಲತಾ ಸೋಮಲ್  ಸಮ್ಮತಿಸಿದ್ದರು. ಅವರ ವರ್ಗಾವಣೆಯ ನಂತರ ಬಂದ ಆಯುಕ್ತರು ಆಸ್ಪತ್ರೆಯ ಕಟ್ಟಡ ಕೆಡವಲು ಸೂಚಿಸಿದ್ದಾರೆ. ಈ ಕೃತ್ಯದ ಹೊಣೆ ಅವರೇ ಹೋರಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆ ಕಟ್ಟಡ ಕೆಡವಿರುವುದು ಅಮಾನವೀಯ. ಭಾರತೀಯ ಕುಟುಂಬ ಯೋಜನಾ ಸಂಘ ಒಂದು ಅಂತರರಾಷ್ಟ್ರೀಯ ಸಂಸ್ಥೆ. ಕಟ್ಟಡದ ಧ್ವಂಸದಿಂದ ₨ 20 ಲಕ್ಷ ನಷ್ಟವಾಗಿದೆ. ಈ ಕೃತ್ಯ ಜಿಲ್ಲಾಧಿಕಾರಿ ಗಮನಕ್ಕೂ ಬಂದಿಲ್ಲ. ಇದೊಂದು ನೀಚ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ಪುಷ್ಪಾ ಶೆಟ್ಟಿ, ಪದಾಧಿಕಾರಿಗಳಾದ ಪ್ರೊ.ಚಂದ್ರಶೇಖರ್, ಭಾರತೀ ಚಂದ್ರಶೇಖರ್, ಕಿರಣ್ ದೇಸಾಯಿ, ಉಮೇಶ್ ಆರಾಧ್ಯ, ರಮೇಶ್ ಬಾಬು ಜಾಧವ್, ಎ.ಎಸ್.ಹನುಮಾನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು