ಶಿವಮೊಗ್ಗ: ಎರಡೂ ಗ್ರಾಮಗಳನ್ನು ಗೋವಿಂದಾಪುರಕ್ಕೆ ಸ್ಥಳಾಂತರಮಾಡಬೇಕು. ಹೊಸ ಸ್ಥಳದಲ್ಲಿ ವಸತಿ ಕಲ್ಪಿಸಬೇಕು ಎಂದುಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಗ್ರಾಮಸ್ಥರು ಒತ್ತಾಯಿಸಿದರು.

ಶಿವಮೊಗ್ಗ ತಾಲ್ಲೂಕು ಕಸಬಾ ಹೋಬಳಿಗೆ ಒಳಪಡುವ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿರುವ ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿ ಹಳ್ಳಿಗಳಲ್ಲಿಯಾವುದೇ ಮೂಲ ಸೌಕರ್ಯ ಇಲ್ಲ. ಪುನರ್ ವಸತಿಗಾಗಿದಶಕಗಳಿಂದ ಒತ್ತಾಯಿಸುತ್ತಿದ್ದೇವೆ. ಒತ್ತಾಯದ ಕೂಗು ಯಾರಿಗೂ ಕೇಳಿಸುತ್ತಿಲ್ಲ. ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದುಗ್ರಾಮದ ಮುಖಂಡರಾದಸದಸ್ಯ ಸಿ.ರಾಜಪ್ಪ, ಎಂ.ಜೆ.ರಾಜಪ್ಪ, ಎಸ್.ಜೆ.ಮಂಜಪ್ಪ, ಎಸ್.ಜಿ.ಚಟ್ಟಪ್ಪ, ಅರ್ಜುನ್, ತಿಮ್ಮಪ್ಪ, ಪ್ರದೀಪ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗ್ರಾಮಗಳಲ್ಲಿರುವ110 ಕುಟುಂಬಗಳಲ್ಲಿ 90ಕ್ಕೂ ಹೆಚ್ಚು ಕುಟುಂಬಗಳು ಸ್ವಇಚ್ಚೆಯಿಂದ ಅಭಯಾರಣ್ಯದಿಂದ ಹೊರಬರಲುಒಪ್ಪಿಗೆ ನೀಡಲಾಗಿದೆ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಅರಣ್ಯ ಪ್ರದೇಶದಿಂದ ಹೊರಗಿರುವ ಗೋವಿಂದಾಪುರ ಗ್ರಾಮದ ಸರ್ವೆ ನಂಬರ್ 8 ಮತ್ತು 9ರಲ್ಲಿ ಪುನರ್ವಸತಿ ಕಲ್ಪಿಸಲು ಒಪ್ಪಿಗೆಸೂಚಿಸಿದ್ದೇವೆ ಎಂದರು.

ಪುನರ್ವಸತಿ ಯೋಜನೆಯಲ್ಲಿ1,350 ಕೋಟಿ ಇರುತ್ತದೆ. ಶೇ 80ರಷ್ಟು ಹಣ ಬಳಸಬಹುದು.ಅಧಿಕಾರಿಗಳು, ಸರ್ಕಾರ ಬೇಡಿಕೆ ಈಡೇರಿಸಬೇಕು. ದಶಕದ ಕತ್ತಲ ಬದುಕಿಗೆಬೆಳಕು ನೀಡಬೇಕು ಎಂದುಕೋರಿದರು.

ಶೆಟ್ಟಿಹಳ್ಳಿ, ಚಿತ್ರಶೆಟ್ಟಿ ಹಳ್ಳಿಯಲ್ಲಿ ರಸ್ತೆಸೌಕರ್ಯ ಇಲ್ಲ.ವಿದ್ಯುತ್ ಇಲ್ಲ. ಅಭಿವೃದ್ದಿಗೆ ಅರಣ್ಯ ಇಲಾಖೆ ಅವಕಾಶ ಕೊಡುತ್ತಿಲ್ಲ. ಗುಡ್ಡ ಕುಸಿತ, ಕಾಡುಪ್ರಾಣಿಗಳ ಹಾವಳಿ, ಮಂಗನ ಕಾಯಿಲೆ, ಬೆಳೆಯೂ ಇಲ್ಲ, ಉಪ ಕಸುಬುಗಳಿಗೂ ಅವಕಾಶ ಇಲ್ಲ.ಮಳೆ ಬಂದರೆ ದೇವರೇ ಕಾಪಾಡಬೇಕುಎಂದು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.