ಮಂಗಳವಾರ, ಮಾರ್ಚ್ 31, 2020
19 °C

ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಕಾಂಗ್ರೆಸ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಆರು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಕುಸಿದಿದ್ದ ಮನೆಗಳಿಗೆ ಪರಿಹಾರ ನೀಡದೇ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನಿರಾಶ್ರಿತರು ಶುಕ್ರವಾರ  ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮಳೆ, ಪ್ರವಾಹದಿಂದ ಹಲವು ಜನರು ಪ್ರಾಣ ಕಳೆದುಕೊಂಡಿದ್ದರು. ಸಾವಿರರು ಜನರು ನಿರಾಶ್ರಿತರಾಗಿದ್ದರು. ಆಸ್ತಿ, ಮನೆ, ಜಾನುವಾರು, ನಿತ್ಯ ಬಳಸುವ ಸಾಮಗ್ರಿ ಕಳೆದುಕೊಂಡಿದ್ದರು. ಇದುವರೆಗೆ  ಭಾಗಶಃ ಬಿದ್ದಂತಹ ಮನೆಗಳಿಗೆ ಪಾಲಿಕೆ ತಲಾ ₨ 10 ಸಾವಿರ ಹಾಗೂ ಸಂಪೂರ್ಣ ಬಿದ್ದ ಮನೆಗಳಿಗೆ ₨ 25 ಸಾವಿರ ತಾತ್ಕಾಲಿಕ ಪರಿಹಾರ ನೀಡಿದೆ. 1526 ನಿರಾಶ್ರಿತರು ಅಲ್ಪ ಮೊತ್ತದ ಪರಿಹಾರ ಪಡೆದಿದ್ದಾರೆ. ಹೆಚ್ಚಿನ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತ್ರಸ್ತರನ್ನು ಭೇಟಿ ಮಾಡಿದಾಗ ಸಂಪೂರ್ಣ ಮನೆ ಕಳೆದುಕೊಂಡ ನಿರಾಶ್ರಿತರಿಗೆ ₨ 5 ಲಕ್ಷ ನೀಡುವ ಭರವಸೆ ನೀಡಿದ್ದರು. ಯಾವುದೇ ದಾಖಲೆ, ಪರಿಚಯ ಪತ್ರ, ಖಾತೆ ಇಲ್ಲದ ಮನೆಗಳಿಗೂ ₨ 5 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಆದರೆ, ಇದುವರೆಗೆ ಸುಮಾರು 824 ಸಂತ್ರಸ್ತರಿಗೆ ತಲಾ ₨ 1 ಲಕ್ಷ ಜಮೆ ಮಾಡಲಾಗಿದೆ. ಬಾಕಿ ₨ 4 ಲಕ್ಷ ನೀಡಿಲ್ಲ. ಇದರಿಂದ ಮನೆ ಕಟ್ಟಿಕೊಳ್ಳು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ನಿರಾಶ್ರಿತರು ಪರಿಹಾರಕ್ಕಾಗಿ ನಿತ್ಯವೂ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಅಧಿಕಾರಿಗಳು ಮೂಲ ದಾಖಲೆಗಳು ಇಲ್ಲ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ನೀಡಿದ ಭರವಸೆಗೂ ಬೆಲೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್‌.ಸಿ.ಯೋಗೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್‌.ರಮೇಶ್, ಪಾಲಿಕೆ ಸದಸ್ಯರಾದ ಬಿ.ಎ.ರಮೇಶ್‌ ಹೆಗ್ಡೆ, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ, ಆರ್.ಸಿ ನಾಯಕ್, ಶಾಮೀರ್‌ ಖಾನ್, ಮೆಹಕ್ ಷರೀಫ್, ರೇಖಾ ರಂಗನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಂಡಿತ್ ವಿ.ವಿಶ್ವನಾಥ್, ನಾಗರಾಜ್, ಮುಖಂಡರಾದ ಎಲ್.ರಾಮೇಗೌಡ, ರವಿಕುಮಾರ್, ಎಚ್.ಎಂ. ಮಧು, ಕೆ.ರಂಗನಾಥ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)