ಬುಧವಾರ, ಜನವರಿ 22, 2020
28 °C

12 ಜ್ಯೋತಿರ್ಲಿಂಗಗಳ ಪ್ರತಿಷ್ಠಾಪನೆ 23ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತಾಲ್ಲೂಕಿನ ಅಲ್ಕೂರು ಗ್ರಾಮದ ಶ್ರೀ ಮಲ್ಲಿಕಾರ್ಜುನ (ಹರಹರಿ) ದೇವಸ್ಥಾನದಲ್ಲಿ 12 ಜ್ಯೋತಿರ್ಲಿಂಗಗಳ ಪ್ರತಿಷ್ಠಾಪನೆಯ ಮೂರನೇ ವಾರ್ಷಿಕೋತ್ಸವ ಹಾಗೂ ಶ್ರೀಗಳ ತುಲಾಭಾರ ಕಾರ್ಯಕ್ರಮವನ್ನು ಡಿಸೆಂಬರ್ 23 ರಂದು ಹಮ್ಮಿಕೊಳ್ಳಲಾಗಿದೆ ಎಂದು 12 ಜ್ಯೋತಿರ್ಲಿಂಗ ಟ್ರಸ್ಟ್ ಖಜಾಂಚಿ ಪಿ ಮಲ್ಲಪ್ಪಗೌಡ ಚಾಕಲ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಸಂಜೆ 5 ಗಂಟೆಗೆ 12 ಜ್ಯೋತಿರ್ಲಿಂಗ ಹಾಗೂ ನಂದಿ, ವಿಜ್ಞೇಶ್ವರ, ಭ್ರಮರಾಂಭ, ಸರಸ್ವತಿ ದೇವರಿಗೆ ಮಹಾರುದ್ರಾಭಿಷೇಕ ಹಾಗೂ  ಹೋಮ ಕಾರ್ಯಕ್ರಮ ನೆರವೇರಿಸಲಾಗುವುದು. 10 ಗಂಟೆಗೆ ಕಳಸ ಕುಂಭಗಳೊಂದಿಗೆ ಭವ್ಯ ಮೆರವಣಿಗೆ ಜರುಗುವುದು. ಆನಂತರ ಉಡಿತುಂಬುವ ಕಾರ್ಯಕ್ರಮ ನಡೆಯುವುದು ಎಂದರು.

ಮಟಮಾರಿ ಬಿಚ್ಚಾಲಿ ಮಠದ ವೀರತಪಸ್ವಿ ವೀರಭದ್ರ ಸ್ವಾಮೀಜಿ, ನಿಲಿಗಲ್ಲ ಬೃಹನ್ಮಠದ ಪಂಚಾಕ್ಷರಿ ಸ್ವಾಮೀಜಿ, ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಸ್ವಾಮೀಜಿ, ಸೋಮವಾರಪೇಟ್ ಹಿರೇಮಠದ ಅಭಿನವ ರಾಚೋಟಿವೀರ ಸ್ವಾಮೀಜಿ, ಕಲ್ಲೂರ ಅಡವೀಶ್ವರ ಶಿವಯೋಗಿಗಳ ಮಠದ ಶ್ರೀಗುರು ಶಂಭುಲಿಂಗ ಸ್ವಾಮೀಜಿಗಳಿಗೆ ತುಲಾಭಾರ ಸೇವೆ ನಡೆಯುವುದು. ಆನಂತರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಆಲ್ಕೂರು ಬಸವರಾಜಸ್ವಾಮಿ, ನಾಗರೆಡ್ಡಿಪ್ಪ, ತಾಯಪ್ಪ, ಸಿದ್ದಲಿಂಗಯ್ಯಸ್ವಾಮಿ, ಶರಣಪ್ಪ, ನರಸನಗೌಡ ಇದ್ದರು.

ಪ್ರತಿಕ್ರಿಯಿಸಿ (+)