ಗುರುವಾರ , ಮಾರ್ಚ್ 4, 2021
18 °C

ರಾಯಚೂರಿನಲ್ಲಿ 123 ಮದ್ಯದಂಗಡಿ ಓಪನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ 31 ಎಂಎಸ್‌ಐಎಲ್‌ ಮಳಿಗೆ ಸೇರಿದಂತೆ ಒಟ್ಟು  123 ಮದ್ಯದಂಗಡಿಗಳನ್ನು ತೆರೆಯುವುದಕ್ಕೆ ಪರವಾನಿಗೆ ನೀಡಲಾಗಿದ್ದು, ಸೋಮವಾರ ಬೆಳಿಗ್ಗೆಯಿಂದಲೇ ಮದ್ಯಪ್ರಿಯರು ಸರದಿಯಲ್ಲಿ ನಿಂತಿದ್ದರು.

ಅದರಲ್ಲೂ ಎಂಎಸ್‌ಐಎಲ್‌ ಮಳಿಗೆಗಳ ಎದುರು ಸರದಿ ಸಾಲು ಉದ್ದವಾಗಿತ್ತು. ಅಂತರ ಕಾಯ್ದುಕೊಳ್ಳಲು ಹಾಕಿದ್ದ ಬ್ಯಾರಿಕೇಡ್‌ ಹಾಗೂ ಚಿಹ್ನೆಗಿಂತಲೂ ಹೆಚ್ಚು ಜನರು ನೆರೆದಿದ್ದರು. ಆರಂಭದಲ್ಲಿ ಮಾತ್ರ ಅಂತರ ಕಾಯ್ದುಕೊಂಡಿರುವುದು ಕಂಡುಬಂತು, ಮಧ್ಯಾಹ್ನದ ನಂತರ ಗುಂಪಾಗಿ ನಿಂತು ಮದ್ಯ ಖರೀದಿಸುತ್ತಿರುವುದು ಕಂಡುಬಂತು.

ಲಿಂಗಸುಗೂರು, ಮಾನ್ವಿ, ದೇವದುರ್ಗ ಹಾಗೂ ಸಿಂಧನೂರು ತಾಲ್ಲೂಕು ಕೇಂದ್ರಗಳಲ್ಲಿರುವ ಸಿಎಲ್‌–2 ಮದ್ಯದಂಗಡಿಗಳ ಎದುರು ಸರದಿ ಏರ್ಪಟ್ಟಿತ್ತು. ಸಂಜೆ 7 ಗಂಟೆವರೆಗೂ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ.

ತಲುಪಿದ ಕಾರ್ಮಿಕರು: ಬೆಂಗಳೂರಿನಿಂದ 37 ಸರ್ಕಾರಿ ಬಸ್‌ಗಳಲ್ಲಿ ರಾಯಚೂರು ಜಿಲ್ಲೆಯ ಕಾರ್ಮಿಕರನ್ನು ಭಾನುವಾರ ತಡರಾತ್ರಿ ಕರೆತರಲಾಗಿದ್ದು, ಕೇಂದ್ರ ಬಸ್‌ ನಿಲ್ದಾಣದಲ್ಲಿ ಎಲ್ಲ ಆರೋಗ್ಯ ತಪಾಸಣೆ ನಡೆಸಲಾಯಿತು. ಆನಂತರ ಎಲ್ಲರನ್ನು ಸ್ವಗ್ರಾಮಗಳಿಗೆ ತಲುಪಿಸಲಾಯಿತು ಎಂದು ಜಿಲ್ಲಾಡಳಿತ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು