ಗುರುವಾರ , ಆಗಸ್ಟ್ 5, 2021
24 °C

ಅಂತ್ಯಕ್ರಿಯೆಲ್ಲಿ ಭಾಗಿಯಾಗಿದ್ದ 38 ಜನರಿಗೆ ಹೋಂ ಕ್ವಾರಂಟೈನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ: ಕೋವಿಡ್‌ನಿಂದ ಈಚೆಗೆ ಮೃತಪಟ್ಟ ತಾಲ್ಲೂಕಿನ ಕೋತಿಗುಡ್ಡ ಗ್ರಾಮದ ಶಿವಪ್ಪ ಬಲ್ಲಿದವ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ 38 ಸಂಬಂಧಿಗಳನ್ನು ತಾಲ್ಲೂಕು ಆಡಳಿತವು ಹೋಂ ಕ್ವಾರಂಟೈನ್‌ ಮಾಡಿದೆ.

ಅಂತ್ಯಸಂಸ್ಕಾರದಲ್ಲಿ ಭಾಗಿಯಾದವರ ಮಾಹಿತಿ ಸಂಗ್ರಹಕ್ಕಾಗಿ ತಂಡ ರಚಿಸಲಾಗಿತ್ತು. ಇದೀಗ ಹೋಂ ಕ್ವಾರಂಟೈನ್‌ ಇರಬೇಕಾದವರ ಕೈ ಮಣಿಕಟ್ಟಿಗೆ ಮುದ್ರೆ ಹಾಕಲಾಗಿದೆ ಎಂದು ತಹಶೀಲ್ದಾರ್‌ ಮಧುರಾಜ ತಿಳಿಸಿದ್ದಾರೆ.

ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಜಾಗೃತಿ ಮೂಡಿಸಲಾಗಿದೆ. ಗ್ರಾಮದಲ್ಲಿನ ಸಾರ್ವಜನಿಕ ಕೊಳೆಬಾವಿಯನ್ನು ಬಳಸದಂತೆ ಸೂಚಿಸಲಾಗಿದೆ. ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ತೊಂದರೆ ಎದುರಾಗಬಾರದು ಎಂಬ ಕಾರಣಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಮುಂಬೈನಿಂದ ಮೇ 21 ರಂದು ಬಂದಿದ್ದ ಮೃತ ಶಿವಪ್ಪ ಅವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್‌ ಬಂದಿತ್ತು. ಆದರೆ, ಮೇ 28 ರಂದು ಕೋವಿಡ್‌ ಲಕ್ಷಣಗಳು ಕಾಣಿಸಿದ್ದರಿಂದ ದೇವದುರ್ಗದ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರದಿಂದ ರಾಯಚೂರು ಒಪೆಕ್‌ಗೆ ಸ್ಥಳಾಂತರಿಸಲಾಗಿತ್ತು. ಮೇ 29 ರಂದು ಆಸ್ಪತ್ರೆಯಲ್ಲಿ ಮೃತಪಟ್ಟದ್ದರಿಂದ ಮತ್ತೆ ಗಂಟಲು ದ್ರುವ ಪರೀಕ್ಷೆಗೆ ಕಳುಹಿಸಿದಾಗ, ಪಾಸಿಟಿವ್‌ ವರದಿ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.